Friday, 13th December 2024

ಅಂಬೇಡ್ಕರ್‌’ವಾದದ ಸಂಶೋಧಕಿ, ಬರಹಗಾರ್ತಿ ಡಾ.ಗೇಲ್‌ ಓಮ್ವೆಡ್‌ ನಿಧನ

ಸಾಂಗ್ಲಿ: ಅಮೆರಿಕದಲ್ಲಿ ಹುಟ್ಟಿ ಭಾರತದ ದಲಿತ ಚಳುವಳಿ ಮತ್ತು ಅಂಬೇಡ್ಕರ್‌ ವಾದದ ಸಂಶೋಧಕಿ ಮತ್ತು ಬರಹ ಗಾರ್ತಿ ಡಾ. ಗೇಲ್‌ ಓಮ್ವೆಡ್‌ ಬುಧವಾರ ಅನಾರೋಗ್ಯದಿಂದ ಕಾಸೆಗಾಂವ್‌ ನಲ್ಲಿ ನಿಧನರಾದರು.

ಅವರಿಗೆ 81 ವರ್ಷ ವಯಸ್ಸಾಗಿದ್ದು, ಪತಿ ಡಾ. ಭರತ್ ಪಟಂಕರ್‌, ಪುತ್ರಿ ಪ್ರಾಚಿ, ಅಳಿಯ ತೇಜಸ್ವಿ ಹಾಗೂ ಮೊಮ್ಮ ಗಳು ನಿಯಾ ಅಮೆರಿಕದಲ್ಲಿ ನೆಲೆಸಿದ್ದಾರೆ.

ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ ಡಾ. ಓಮ್ವೆಡ್, ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಿದ್ದು, ಬಳಿಕ ದಲಿತರು, ಬಡವರು, ರೈತರು, ಮಹಿಳೆಯರು ಮತ್ತು ಇತರ ಸಾರ್ವಜನಿಕ ಕಾರಣಗಳಿ ಗಾಗಿ ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

1983ರಲ್ಲಿ ಭಾರತದ ಪೌರತ್ವ ಪಡೆದ ಅವರು, ತಮ್ಮ ಪತಿಯೊಂದಿಗೆ ಸೇರಿಕೊಂಡು 1980 ರ ದಶಕದ ಆರಂಭ ದಲ್ಲಿ ಶ್ರಮಿಕ್ ಮುಕ್ತಿ ದಳ ಸ್ಥಾಪಿಸಿದರು. ಹಲವಾರು ಸಾಮಾಜಿಕ ವಿಚಾರಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಭೋದಿಸಿದ್ದಾರೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವಾದ ಆಕ್ಸ್‌ ಫ್ಯಾಮ್‌ ನೋವಿಬ್‌ ಹಾಗೂ ಇತರ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಕಾರ್ಯನಿರ್ವಹಿಸಿದ್ದಾರೆ.