Monday, 14th October 2024

ಹಿಂದುಳಿದ ಸಮುದಾಯ ವಣ್ಣಿಯಾರ್​’ಗೆ ಮೀಸಲಾತಿ​ ರದ್ದು

ನವದೆಹಲಿ: ತಮಿಳುನಾಡಿನ ಹಿಂದುಳಿದ ಸಮುದಾಯ ವಣ್ಣಿಯಾರ್​ಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ನೀಡಲಾಗುತ್ತಿದ್ದ 10.5 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್​ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿರನ್ನೊಳ ಗೊಂಡ ಪೀಠವು ಮೀಸಲಾತಿ ರದ್ದುಗೊಳಿ ಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಎಂಬಿಸಿ ಗುಂಪಿನಲ್ಲಿರುವ 115 ಸಮುದಾಯಗಳಿಗಿಂತ ವಿಭಿನ್ನವಾಗಿ ಪರಿಗಣಿಸಲು ವಣ್ಣಿಯಾಕುಲ ಕ್ಷತ್ರಿಯರನ್ನು ಒಂದು ಗುಂಪಿಗೆ ವರ್ಗೀಕರಿಸಲು ಯಾವುದೇ ಗಣನೀಯ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದೇವೆ. ಆದ್ದರಿಂದ 2021 ರ ಕಾಯಿದೆಯು 14, 15 ಮತ್ತು 16 ರ ಪರಿಚ್ಛೇದಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ ನಾವು ಹೈಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿಯುತ್ತೇವೆ ಎಂದು ಪೀಠ ಹೇಳಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಆಗಿನ ಆಡಳಿತಾರೂಢ ಎಐಎಡಿಂಕೆ ಮಸೂದೆಯನ್ನು ಅಂಗೀ ಕರಿಸಿತ್ತು. ವಣ್ಣಿಯಾರ್ ​ಗಳಿಗೆ ಶೇ.10.5  ಆಂತರಿಕ ಮೀಸಲಾತಿ ಒದಗಿಸಿತು. ಇದರ ಅನುಷ್ಠಾನಕ್ಕಾಗಿ ಕಳೆದ ವರ್ಷ ಜುಲೈನಲ್ಲಿ ಡಿಎಂಕೆ ಸರ್ಕಾರವು ಆದೇಶವನ್ನು ಹೊರಡಿಸಿತ್ತು.