Friday, 13th December 2024

ಹೈದರಾಬಾದ್’ನಲ್ಲಿ 12 ಸೆಂ.ಮೀ. ಮಳೆ: ಎಂಟು ವಿಮಾನಗಳ ಮಾರ್ಗದಲ್ಲಿ ಬದಲಾವಣೆ

ಹೈದರಾಬಾದ್: ಹೈದರಾಬಾದ್ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿ ಸುಮಾರು 10- 12 ಸೆಂ.ಮೀ. ಮಳೆಯಾಗಿದೆ.

ನಗರದ ತಗ್ಗು ಪ್ರದೇಶಗಳಲ್ಲಿನ ಪ್ರಬಲ ಪ್ರವಾಹಕ್ಕೆ ಸಿಲುಕಿದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ಭೀಕರ ಪ್ರವಾಹಕ್ಕೆ ಒಳಗಾಗಿರುವ ರೆಸ್ಟೋರೆಂಟ್‌ನ ವೀಡಿಯೊ ದಲ್ಲಿ ಗ್ರಾಹಕರು ಕುಳಿತುಕೊಳ್ಳುವ ಜಾಗದಲ್ಲಿ ತಮ್ಮ ಕಾಲುಗಳನ್ನು ಪ್ರವಾಹದ ನೀರಿನಿಂದ ಮೇಲೆ ಎತ್ತಿ ಆಹಾರ ಸೇವಿಸುತ್ತಿರುವುದು, ಹೈದರಾಬಾದ್ ನಿವಾಸಿಗಳು ಹಂಚಿಕೊಂಡ ಇತರ ವಿಡಿಯೋಗಳಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಪ್ರವಾಹಕ್ಕೆ ಸಿಲುಕಿ ತೇಲಿ ಹೋಗುತ್ತಿರುವುದನ್ನು ನೋಡಬಹುದಾಗಿದೆ.

ಭಾರೀ ಮಳೆಯ ಸಂದರ್ಭದಲ್ಲಿ ಎಂಟು ವಿಮಾನಗಳನ್ನು ಹತ್ತಿರದ ನಗರಗಳಿಗೆ, ಆರು ವಿಮಾನ ಗಳನ್ನು ಬೆಂಗಳೂರಿಗೆ ಮತ್ತು ತಲಾ ಒಂದನ್ನು ವಿಜಯವಾಡ ಮತ್ತು ಚೆನ್ನೈಗೆ ತಿರುಗಿಸಲಾಯಿತು.

ಭಾರೀ ಮಳೆಯಿಂದಾಗಿ ಕಾಲುವೆಗಳು ಉಕ್ಕಿ ಹರಿದಿದ್ದರಿಂದಾಗಿ, ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿ ದ್ದಾರೆ. ರಕ್ಷಣಾ ತಂಡವು ಅವರಿಗಾಗಿ ಶೋಧ ನಡೆಸು ತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಪುರುಷೋತ್ತಮ್ ಹೇಳಿಕೆ ನೀಡಿದ್ದಾರೆ.