Friday, 13th December 2024

ಮೇಘಾಲಯ ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ನಿರ್ಬಂಧ ತೆರವು

ಗುವಾಹಟಿ: ಮೇಘಾಲಯವನ್ನು ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ಅನುಮತಿ ನೀಡಲಾಗಿದೆ.

ಅಸ್ಸಾಂ- ಮೇಘಾಲಯ ಗಡಿಯಲ್ಲಿ ನಡೆದ ಗಲಭೆ ಕಾರಣದಿಂದಾಗಿ ಸಾರ್ವಜನಿಕರಿಗೆ ಮೇಘಾಲಯ ಪ್ರಯಾಣವನ್ನು ನಿರ್ಬಂಧಿಸ ಲಾಗಿತ್ತು. ಘಟನೆ ನಡೆದ ಆರು ದಿನಗಳ ಬಳಿಕ ನಿರ್ಬಂಧವನ್ನು ಭಾನುವಾರ ತೆರವು ಮಾಡಲಾಗಿದೆ.

ಅಗತ್ಯ ಇದ್ದಲ್ಲಿ, ರಾಜ್ಯದ ವಾಹನಗಳ ಜೊತೆ ಬೆಂಗಾವಲು ವಾಹನಗಳನ್ನು ಕಳುಹಿಸಲಾಗು ತ್ತದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಗುವಾಹಟಿಯ ಜೊರಹಾಟ್‌ ಮತ್ತು ಕಚಾರ್‌ ಗಡಿ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ಮುಂದುವರೆದಿದೆ. ವ್ಯಾಪಾರ ಸಂಬಂಧಿ ವಾಹನಗಳಿಗೆ, ಟ್ರಕ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿಲ್ಲ.

‘ಅಸ್ಸಾಂ ಮತ್ತು ಮೇಘಾಲಯದ ನಡುವೆ ಎಲ್ಲವೂ ಸಹಜಸ್ಥಿತಿಗೆ ಮರಳಿಲ್ಲ. ಅಸ್ಸಾಂ ಜನರ ಅಥವಾ ವಾಹನಗಳ ಮೇಲೆ ಮೇಘಾ ಲಯದಲ್ಲಿ ದಾಳಿ ನಡೆಯಬಹುದು. ಆದ್ದರಿಂದ ಮೇಘಾಲಯಕ್ಕೆ ಹೋಗದಿರುವುದೇ ಒಳಿತು’ ಎಂದು ಪೊಲೀಸರು ಹೇಳಿದ್ದಾರೆ.

‘ಒಂದುವೇಳೆ ಹೋಗಲೇಬೇಕಾದ ಜರೂರು ಇದ್ದರೆ, ಮೇಘಾಲಯದ ನೋಂದಣಿ ಇರುವ ವಾಹನಗಳಲ್ಲೇ ಪ್ರಯಾಣ ಬೆಳೆಸಿ’ ಎಂದಿದ್ದಾರೆ.