Wednesday, 11th December 2024

ಕ್ಷಮಾಪಣೆ ಪತ್ರದೊಂದಿಗೆ ಕದ್ದ ವಸ್ತುಗಳ ಹಿಂದಿರುಗಿಸಿದ ಕಳ್ಳ..!

ಮಧ್ಯಪ್ರದೇಶ: ಬಾಲಾಘಾಟ್ ಜಿಲ್ಲೆಯ ಲಮ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಾಥ ದಿಗಂಬರ ಜೈನ ದೇವಸ್ಥಾನದಿಂದ ‘ಛತ್ರ’ ಸೇರಿದಂತೆ 10 ಅಲಂಕಾರಿಕ ಬೆಳ್ಳಿಯ ತುಂಡುಗಳು ಮತ್ತು ಮೂರು ಹಿತ್ತಾಳೆ ವಸ್ತುಗಳನ್ನು ಕದ್ದಿದ್ದ ಕಳ್ಳ ಕ್ಷಮಾಪಣೆ ಪತ್ರದೊಂದಿಗೆ ಕದ್ದ ವಸ್ತುಗಳ ಹಿಂದಿರುಗಿಸಿದ್ದಾನೆ.

ಶುಕ್ರವಾರ, ಜೈನ ಕುಟುಂಬದ ಸದಸ್ಯರು ಲ್ಯಾಮ್ಟಾದ ಪಂಚಾಯತ್ ಕಚೇರಿ ಬಳಿಯ ಹೊಂಡದಲ್ಲಿ ಚೀಲವನ್ನು ಬಿದ್ದಿರುವು ದನ್ನು ಗಮನಿಸಿದ ನಂತರ ಅವರು ಪೊಲೀಸರು ಮತ್ತು ಸಮುದಾಯದ ಸದಸ್ಯರಿಗೆ ಮಾಹಿತಿ ನೀಡಿದರು.

ಕದ್ದ ಮಾಲಿನ ಜೊತೆಗೆ ಕಳ್ಳನ ಕ್ಷಮಾಪಣೆ ಪತ್ರ ಇತ್ತೆಂದು ಪೊಲೀಸರು ಹೇಳಿದ್ದಾರೆ.

“ನನ್ನ ಕೃತ್ಯಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಕಳ್ಳತನದ ನಂತರ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ಪತ್ರದಲ್ಲಿ ಹೇಳಲಾ ಗಿದೆ. ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಳ್ಳನನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.