ನವದೆಹಲಿ: ರಾಷ್ಟ್ರರಾಜಧಾನಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದಾರೆ.
ಆ ಮೂಲಕ ರಾಹುಲ್ ಗಾಂಧಿ ಅವರು, ಕೆಂಪುಕೋಟೆಯಲ್ಲಿ ದಶಕದ ಬಳಿಕ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕ ಎನಿಸಿದ್ದಾರೆ.
2014ರಿಂದ 2023ರ ವರೆಗೆ ವಿರೋಧ ಪಕ್ಷದ ನಾಯಕನ ಕೊರತೆ ಕಾಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಾಂಗ್ರೆಸ್‌ನ ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
‘ಸ್ವಾತಂತ್ರ್ಯ ಎಂಬುವುದು ನಮಗೆ ಕೇವಲ ಒಂದು ಪದವಲ್ಲ. ಇದು ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಡಗಿರುವ ಅತಿ ದೊಡ್ಡ ರಕ್ಷಣಾ ಕವಚವಾಗಿದೆ. ಇದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಹೇಳುವ ಮತ್ತು ಕನಸುಗಳನ್ನು ಈಡೇರಿಸುವ ಭರವಸೆಯಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಸಂದೇಶದಲ್ಲಿ’ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸುಮಾರು 6,000 ಅತಿಥಿಗಳು ಭಾಗವಹಿಸಿದ್ದಾರೆ.