Friday, 13th December 2024

ಶ್ರೀಮಂತ ಮುಖ್ಯಮಂತ್ರಿಗಳ ಸಮೀಕ್ಷೆ: ವೈ.ಎಸ್.ಜಗನ್ ಮೋಹನ್ ರೆಡ್ಡಿ ಶ್ರೀಮಂತ ಸಿಎಂ

Y S JaganMohan Reddy

ವದೆಹಲಿ : ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಕರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಮೀಕ್ಷೆ ಮಾಡಿದ್ದು, ವರದಿಯ ಪ್ರಕಾರ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ 510 ಕೋಟಿ ರೂ.ಗಳೊಂದಿಗೆ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಎರಡನೇ ಶ್ರೀಮಂತ ಮುಖ್ಯ ಮಂತ್ರಿಯಾಗಿದ್ರೆ, 63 ಕೋಟಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿರುವ ನವೀನ್ ಪಟ್ನಾಯಕ್ ದೇಶದ 30 ಮುಖ್ಯಮಂತ್ರಿಗಳಲ್ಲಿ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅರುಣಾಚಲ ಪ್ರದೇಶದ ಬಿಜೆಪಿಯ ಪೆಮಾ ಖಂಡು ಅವರು 163 ಕೋಟಿ ರೂ.ಗಳ ಒಟ್ಟು ಆಸ್ತಿಯೊಂದಿಗೆ ವೈ.ಎಸ್.ಜಗನ್ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಒಡಿಶಾದ ಮುಖ್ಯಮಂತ್ರಿ ಬಿಜೆಡಿಯ ನವೀನ್ ಪಟ್ನಾಯಕ್ 63 ಕೋಟಿ ರೂ.ಗಳ ಆಸ್ತಿ ಯನ್ನ ಘೋಷಿಸಿದ್ದಾರೆ.

ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ನಂತರದ ಸ್ಥಾನಗಳಲ್ಲಿ ಕೇರಳದ ಪಿಣರಾಯಿ ವಿಜಯನ್ (ಸಿಪಿಐ-ಎಂ) (ಸಿಪಿಎಂ) ಮತ್ತು ಬಿಜೆಪಿಯ ಮನೋಹರ್ ಲಾಲ್ (ಹರಿಯಾಣ) 1.27 ಕೋಟಿ ರೂಪಾಯಿ.

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಒಟ್ಟು ಆಸ್ತಿ 8.92 ಕೋಟಿಯಾಗಿದ್ದರೆ, ಮಹಾರಾಷ್ಟ್ರದ ಶಿವಸೇನೆಯ ಏಕನಾಥ್ ಸಂಭಾಜಿ ಶಿಂಧೆ 3.75 ಕೋಟಿ ರೂ. ಅವರ ಘೋಷಿತ ಆಸ್ತಿಯ ಮೌಲ್ಯ 11.6 ಕೋಟಿ ರೂಪಾಯಿ.

ಒಟ್ಟು 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು, ಇದು ಶೇಕಡಾ 97ರಷ್ಟಿದ್ದರೆ, ಒಂಬತ್ತು ಮುಖ್ಯಮಂತ್ರಿಗಳು 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲವನ್ನ ಘೋಷಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರ ಸರಾಸರಿ ಆಸ್ತಿ ಮೌಲ್ಯ 33.96 ಕೋಟಿ ರೂಪಾಯಿ ಆಗಿದೆ.

ವೈ.ಎಸ್.ಜಗನ್, ಪೆಮಾ ಖಂಡು ಮತ್ತು ನವೀನ್ ಪಟ್ನಾಯಕ್ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಮೊದಲ ಮೂರು ಸ್ಥಾನಗಳನ್ನ ಉಳಿಸಿಕೊಂಡಿದ್ದಾರೆ. ಕಡು ಬಡವರಲ್ಲಿ, ಮಮತಾ ಬ್ಯಾನರ್ಜಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಜೆಡಿಯುನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ವರ್ಷ 56 ಲಕ್ಷ ರೂ.ಗಳೊಂದಿಗೆ ಮಮತಾ ಬ್ಯಾನರ್ಜಿ ನಂತರದ ಸ್ಥಾನದಲ್ಲಿದ್ದರು.