Friday, 13th December 2024

ಸೈನಾ ನೆಹ್ವಾಲ್’ರನ್ನು ಸರ್ಕಾರಿ ಶಟ್ಲರ್ ಎಂದ ಆರ್‌ಜೆಡಿ ನಾಯಕ

ಲಖನೌ: ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಯೋಗಿ ಆದಿತ್ಯನಾಥ್ ಸರ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ಸೈನಾ ನೆಹ್ವಾಲ್ ಟ್ವಿಟ್ ಮಾಡಿದ್ದರು. ನೆಹ್ವಾಲ್ ಟ್ವೀಟ್ ಒಂದೂವರೆ ಗಂಟೆಗಳ ನಂತರ ರಾಷ್ಟ್ರೀಯ ಲೋಕ ದಳ ಅಧ್ಯಕ್ಷ ಚೌದರಿ, ಜನರ ತೀರ್ಪನ್ನು ವಿಭಜಿಸುವ ಬಿಜೆಪಿ ಕೌಶಲ್ಯವನ್ನು ಸರ್ಕಾರಿ ಶಟ್ಲರ್ ಗುರುತಿಸಿದ್ದಾರೆ ಎಂದಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಬಿಜೆಪಿ ಶನಿವಾರ ಹೇಳಿಕೆ ನೀಡಿತ್ತು.