Saturday, 14th December 2024

ಸೂರತ್‌ನಲ್ಲಿ ಇಂದು ಪ್ರಧಾನಿ ಮೋದಿ, ದೆಹಲಿ ಮುಖ್ಯಮಂತ್ರಿ ರೋಡ್‌ ಶೋ

ಹಮದಾಬಾದ್: ಗುಜರಾತ್ ಚುನಾವಣೆಗೆ ಭರದ ಸಿದ್ಧತೆ ನಡೆದಿದ್ದು, ಡಿಸೆಂಬರ್ 1ರಂದು ಮೊದಲ ಹಂತದ ಮತದಾನ ನಡೆಯಲಿದೆ.

ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿ ವಾಲ್ ಅವರು ಗುಜರಾತ್‌ನ ಸೂರತ್‌ನಲ್ಲಿ ಇಂದು ರೋಡ್‌ ಶೋ ಮತ್ತು ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.

182 ಸದಸ್ಯಬಲದ ಗುಜರಾತ್ ವಿಧಾನಸಭೆಗೆ ಸೂರತ್‌ನಿಂದ 12 ಮಂದಿ ಶಾಸಕರು ಆಯ್ಕೆ ಯಾಗುತ್ತಾರೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ರಾಜಕೀಯ ಪಕ್ಷಗಳು ಹೆಚ್ಚಿನ ಆಸಕ್ತಿ ಹೊಂದಿವೆ.

ಪ್ರಧಾನಿ ಮೋದಿ, ಸೂರತ್‌ನಲ್ಲಿ ಇಂದು ಏರ್‌ಪೋರ್ಟ್‌ನಿಂದ ಮೋಟಾ ವರಚ್ಚಾ ಪ್ರದೇಶಕ್ಕೆ 25 ಕಿ.ಮೀ. ದೂರದವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು.

ಅರವಿಂದ ಕೇಜ್ರಿವಾಕ್ ಅವರು ಎರಡು ದಿನಗಳ ಕಾಲ ಸೂರತ್‌ನಲ್ಲಿದ್ದು, ವಸ್ತ್ರ ಉದ್ಯಮದ ಪ್ರಮುಖರ ಜತೆ ಚರ್ಚಿಸಲಿದ್ದಾರೆ. ಅಲ್ಲದೆ, ಕತರ್‌ಗಾಮ್‌ನಲ್ಲಿ ರೋಡ್ ಶೋ ನಡೆಸಲಿದ್ದಾರೆ.