Friday, 13th December 2024

ನಿರ್ಲಕ್ಷ್ಯ ಚಾಲನೆ: ವಾದ್ರಾ ವಾಹನಕ್ಕೆ ದಂಡ

ನವದೆಹಲಿ: ಸುಖ್ ದೇವ್ ವಿಹಾರ್ ಪ್ರದೇಶದ ತಮ್ಮ ಕಚೇರಿಗೆ ಭದ್ರತಾ ಸಿಬ್ಬಂದಿ ಜೊತೆಗೆ ಹೋಗುತ್ತಿದ್ದ ವೇಳೆ ನಿರ್ಲಕ್ಷ್ಯ ಚಾಲನೆ ಮಾಡಿದ  ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ.

ಮೋಟಾರು ವಾಹನ ಕಾಯ್ದೆಯಂತೆ ದಂಡ ವಿಧಿಸಲಾಗಿದೆ. ರಾಬರ್ಟ್ ವಾದ್ರಾ ಅವರ ಭದ್ರತಾ ಸಿಬ್ಬಂದಿ ವಾಹನ ಹಿಂದೆಯೇ ಅವರ ವಾಹನ ಜೊತೆಗೆ ಸಾಗುತ್ತಿತ್ತು. ಕಾರನ್ನು ಚಾಲಕ ಚಲಾಯಿಸುತ್ತಿದ್ದ. ಬರಾಪುಲ್ಲಾ ಫ್ಲೈಓವರ್ ಬಳಿ ವಾಹನದ ಚಾಲಕ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ಭದ್ರತಾ ಸಿಬ್ಬಂದಿ ವಾಹನ ಡಿಕ್ಕಿ ಹೊಡೆಯಿತು.