Wednesday, 11th December 2024

ಮನಾಲಿಯಲ್ಲಿ ರಾಕ್ ಸಾಲ್ಟ್ ಉತ್ಪಾದನೆ ಶೀಘ್ರ ಆರಂಭ

ಮನಾಲಿ(ಹಿಮಾಚಲ ಪ್ರದೇಶ): ಕಳೆದ ಐದು ದಶಕಗಳ ನಂತರ ದೇಶದ ಉತ್ತರ ಭಾಗದ ರಾಜ್ಯಗಳ ಲ್ಲೊಂದಾದ ಹಿಮಾಚಲ ಪ್ರದೇಶದಲ್ಲಿ ಗಣಿಗಾರಿಕೆ ಮೂರು ತಿಂಗಳಲ್ಲಿ ಆರಂಭವಾಗುತ್ತಿದ್ದು, ರಾಕ್ ಸಾಲ್ಟ್ ಉತ್ಪಾದನೆ ಆರಂಭವಾಗಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಇಲ್ಲಿ ಹತ್ತರಿಂದ ಹನ್ನೆರಡು ಟನ್ ರಾಕ್ ಸಾಲ್ಟ್ ಉತ್ಪನ್ನ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಗುಮ್ಮಾ ಮತ್ತು ಡ್ರ‍್ಯಾಂಗ್ ನಗರಗಳಲ್ಲಿ ರಾಕ್ ಸಾಲ್ಟ್‌ ಉತ್ಪಾದನೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸ್ಥಳೀಯ ಸಂಸದರು ಖಚಿತಪಡಿಸಿದ್ದಾರೆ.