Friday, 13th December 2024

ಮೇಲ್ಛಾವಣಿಗೆ ಅಳವಡಿಸಿದ್ದ ಟಿನ್​​ ರೂಫ್​ ಕುಸಿತ: ಒಂಬತ್ತು ಮಕ್ಕಳಿಗೆ ಗಾಯ

ಥಾಣೆ: ಫುಟ್ಬಾಲ್ ಮೈದಾನದ ಮೇಲ್ಛಾವಣಿಗೆ ಅಳವಡಿಸಿದ್ದ ಟಿನ್​​ ರೂಫ್​ ಬಿದ್ದ ಪರಿಣಾಮ ಒಂಬತ್ತು ಮಕ್ಕಳು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಪೈಕಿ ಐವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಭಾರೀ ಗಾಳಿ ಮಳೆಯಿಂದ ಮೇಲ್ಛಾವಣಿಗೆ ಅಳವಡಿಸಿದ್ದ ಟಿನ್​​ ರೂಫ್ ತುಂಡಾಗಿ ಮೈದಾನದಲ್ಲಿ ಆಡವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಥಾಣೆಯ ಉಪವನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಮಕ್ಕಳನ್ನು ಸಮೀಪದ ಬೆಥನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.