ನವದೆಹಲಿ: ಭಾರತದ ಹಮ್‍ದರ್ದ್ ಬ್ರಾಂಡ್ ಆಗಿರುವ ‘ರೂಹ್ ಅಫ್ಝಾ’ ಬ್ರಾಂಡ್ ಅಡಿಯಲ್ಲಿ ಪಾಕಿಸ್ತಾನ ಉತ್ಪಾದಿತ ಶರಬತ್ತು ಗಳನ್ನು ಅಮೆಝಾನ್ ಇ-ಕಾಮರ್ಸ್ ಪ್ಲಾಟ್‍ಫಾರಂ ಚಿಲ್ಲರೆ ಮಾರಾಟಗಾರರು ಮಾರಾಟ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಪಾಕಿಸ್ತಾನದಲ್ಲಿ ಉತ್ಪಾದಿಸಲಾದ ಶರಬತ್ತುಗಳನ್ನು ನಮ್ಮದ್ದೇ ಬ್ರಾಂಡ್ ಹೋಲುವ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹಮ್‍ದರ್ದ್ ನ್ಯಾಷನಲ್ ಫೌಂಡೇಷನ್ (ಇಂಡಿಯಾ) ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.
1907ರಲ್ಲಿ ‘ರೂಹ್ ಆಫ್ಝಾ’ ಬ್ರಾಂಡ್ ಆರಂಭಿಸಿದ ಹಮ್‍ದರ್ದ್ ಪರವಾಗಿ ಹೈಕೋರ್ಟ್ ತೀರ್ಪು ನಿಡಿದೆ. ಕಂಪೆನಿ ವಾರ್ಷಿಕವಾಗಿ 200 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಈ ಬ್ರಾಂಡ್‍ನಡಿ ಮಾರಾಟ ಮಾಡುತ್ತದೆ.
ಅಮೆಝಾನ್ ಸೆಲ್ಲರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಗೋಲ್ಡನ್ ಲೀಫ್ ವಿರುದ್ಧ ಹಮ್‍ದರ್ದ್ ನ್ಯಾಷನಲ್ ಫೌಂಡೇ ಷನ್ (ಇಂಡಿಯಾ) ಮತ್ತು ಹಮ್‍ದರ್ದ್ ದವಾಖಾನಾ ಸಲ್ಲಿಸಿದ್ದ ಟ್ರೇಡ್‍ಮಾರ್ಕ್ ಉಲ್ಲಂಘನೆ ಅರ್ಜಿಯನ್ನು ನಿರ್ಧರಿಸುವ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಗೋಲ್ಡನ್ ಲೀಫ್ ಕಂಪನಿ ರೂಹ್ ಅಫ್ಝಾ ಮಾರ್ಕ್‍ನಲ್ಲಿ ಅಮೆಝಾನ್ ಇಂಡಿಯಾದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.