Wednesday, 11th December 2024

ನಟಿ ರೂಪಾಲಿ ಗಂಗೂಲಿ ಬಿಜೆಪಿಗೆ ಸೇರ್ಪಡೆ

ಕೊಲ್ಕತ್ತಾ: ಹಿಂದಿಯ ‘ಅನುಪಮಾ’ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
‘ಅನುಪಮಾ’ ಮತ್ತು ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರಗಳಿಗೆ ಹೆಸರುವಾಸಿ ರೂಪಾಲಿ ಲೋಕಸಭೆ ಚುನಾವಣೆಯ ಮೂರನೇ ಹಂತದ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
ಕೊಲ್ಕತ್ತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕೆಲಸ ತನ್ನನ್ನು ಪಕ್ಷದತ್ತ ಆಕರ್ಷಿಸಿದೆ ಎಂದು ನಟಿ ರೂಪಾಲಿ ಪಕ್ಷ ಸೇರ್ಪಡೆ ಬಗ್ಗೆ ಹೇಳಿದ್ದಾರೆ.
ನನ್ನ ಸುತ್ತ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯ ಮಹಾಯಜ್ಞ ನೋಡಿದಾಗ, ನಾನು ಸಹ ಅದರ ಭಾಗವಾಗಬೇಕು ಎಂದು ಅನಿಸಿತು ಎಂದು ಗಂಗೂಲಿ ತಿಳಿಸಿದರು.