Thursday, 3rd October 2024

ಕಾರು ಅಪಘಾತ: ರಾಜ್ಯಸಭಾ ಸದಸ್ಯ ಇಳಂಗೋವನ್ ಪುತ್ರನ ಸಾವು

ಚೆನ್ನೈ: ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ಎನ್​​.ಆರ್​. ಇಳಂಗೋವನ್ ಅವರ ಪುತ್ರ ರಾಕೇಶ್​ (22) ಭೀಕರ ಕಾರು ಅಪಘಾತ ದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.

ಸಂಸದರ ಪುತ್ರ ಪುದುಚೇರಿಯಿಂದ ಚೆನ್ನೈಗೆ ಹೆಚ್ಚು ಪ್ರಯಾಣಿಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ರಾಕೇಶ್​ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್​ ಮೃತ ದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಜಿ ಹಿರಿಯ ವಕೀಲರಾದ ಎನ್‌ಆರ್ ಇಳಂಗೋವನ್ ಅವರು 2020 ರಲ್ಲಿ ತಮಿಳುನಾಡಿ ನಿಂದ ರಾಜ್ಯಸಭಾ ಸದಸ್ಯರಾದರು. ಇದು ಅವರ ಮೊದಲ ಅವಧಿಯಾಗಿದೆ.