Friday, 13th December 2024

ಆರ್.ಎಸ್.ಎಸ್ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ಇನ್ನಿಲ್ಲ

ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ, ಸಂಸ್ಥೆಯ ಮೊದಲ ವಕ್ತಾರ ಮಾಧವ್ ಗೋವಿಂದ್ ವೈದ್ಯ ಅವರು ತಮ್ಮ 97 ವಯಸ್ಸಿನಲ್ಲಿ ನಿಧನರಾದರು.

ಮಧ್ಯಾಹ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಜಿ ವೈದ್ಯ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ವೈದ್ಯ, ಬಳಿಕ ಚೇತರಿಸಿಕೊಂಡಿದ್ದರು. ಶುಕ್ರವಾರ ಇದ್ದಕ್ಕಿದ್ದಂತೆ ಆರೋಗ್ಯ ಕ್ಷೀಣಿಸಿದ್ದು, ಶನಿವಾರ ಮೃತಪಟ್ಟಿರುವುದಾಗಿ ಅವರ ಮೊಮ್ಮಗ ವಿಷ್ಣು ವೈದ್ಯ ತಿಳಿಸಿರುವುದಾಗಿ ವರದಿ ಮಾಡಿದೆ.