Saturday, 23rd November 2024

ರೂಪಾಯಿ ಮೌಲ್ಯದಲ್ಲಿ ಐತಿಹಾಸಿಕ ಕುಸಿತ

ವದೆಹಲಿ : ಕರೆನ್ಸಿ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಐತಿಹಾಸಿಕ ಕುಸಿತವಾಗಿದೆ.

ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 83 ರೂ.ಗಿಂತ ಕಡಿಮೆ ಯಾಗಿದೆ. ರೂಪಾಯಿ 66 ಪೈಸೆ ಅಥವಾ ಶೇಕಡಾ 0.8 ರಷ್ಟು ಕುಸಿತದೊಂದಿಗೆ ಮೊದಲ ಬಾರಿಗೆ 83.02 ರೂಪಾಯಿಗೆ ಕೊನೆಗೊಂಡಿದೆ.

ಮಂಗಳವಾರ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 83ರ ಗಡಿ ದಾಟಿತ್ತು. ಹಿಂದಿನ ವಹಿವಾಟಿನ ದಿನದಂದು ರೂಪಾಯಿ ಮೌಲ್ಯದಲ್ಲಿ 10 ಪೈಸೆ ಕುಸಿತ ಕಂಡು 82.39ಕ್ಕೆ ತಲುಪಿತ್ತು.

ಅಗತ್ಯ ಎಲೆಕ್ಟ್ರಿಕ್ ಸರಕುಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಅನೇಕ ಔಷಧಿಗಳನ್ನು ಭಾರತವು ಬೃಹತ್ ಪ್ರಮಾಣ ದಲ್ಲಿ ಆಮದು ಮಾಡಿಕೊಳ್ಳುತ್ತದೆ. ಹೆಚ್ಚಿನ ಮೊಬೈಲ್‌ಗಳು ಮತ್ತು ಗ್ಯಾಜೆಟ್‌ಗಳನ್ನು ಚೀನಾ ಮತ್ತು ಇತರ ಪೂರ್ವ ಏಷ್ಯಾದ ನಗರ ಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ರುಪಾಯಿ ಮೌಲ್ಯ ಹೀಗೆ ಕುಸಿಯುತ್ತಾ ಹೋದರೆ ಆಮದು ದುಬಾರಿಯಾಗುತ್ತದೆ ಮತ್ತು ನೀವು ಹೆಚ್ಚು ಖರ್ಚು ಮಾಡಬೇಕಾಗುತ್ತದೆ.