ನವದೆಹಲಿ: 2018ರಲ್ಲಿ ಹೋಟೆಲ್ ಐಟಿಸಿ ಮೌರ್ಯದ ಸಲೂನ್ ನಲ್ಲಿ ಸಿಬ್ಬಂದಿ ನೀಡಿದ ತಪ್ಪು ಹೇರ್ ಕಟ್ ಮತ್ತು ಚಿಕಿತ್ಸೆಗಾಗಿ ಮಹಿಳೆಗೆ 2ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕೆಂದು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಘೋಷಿಸಿದೆ.
ಮಹಿಳೆಯೋರ್ವಳಿಗೆ ತಪ್ಪು ಕೇಶ ವಿನ್ಯಾಸ ಮತ್ತು ಚಿಕಿತ್ಸೆ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದೆಹಲಿ ಮೂಲದ ಐಷಾರಾಮಿ ಹೋಟೆಲ್ಗೆ ಸುಮಾರು 2 ಕೋಟಿ ರೂಪಾಯಿಗಳ ಪರಿಹಾರವನ್ನು ಮಹಿಳೆಗೆ ನೀಡಬೇಕೆಂದು ಸೂಚನೆ ನೀಡಿದೆ.
ನ್ಯಾಯಮೂರ್ತಿ ಆರ್.ಕೆ. ಅಗರವಾಲ್ ಮತ್ತು ಡಾ. ಎಸ್.ಎಂ. ಕಾಂತಿಕರ್ ಅವರು, ಮಹಿಳೆಯರು ತಮ್ಮ ಕೂದಲಿಗೆ ಸಂಬಂಧಿಸಿದಂತೆ ತುಂಬಾ ಜಾಗರೂಕ ರಾಗಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಅವರು ಕೂದಲನ್ನು ಉತ್ತಮ ಸ್ಥಿತಿಯಲ್ಲಿಡಲು ಸಾಕಷ್ಟು ಮೊತ್ತವನ್ನು ಖರ್ಚು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಅವರು ತಮ್ಮ ಕೂದಲಿನ ಜೊತೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದಾರೆ. ದೂರುದಾರನು ತನ್ನ ಉದ್ದಕೂದಲಿನ ಕಾರಣದಿಂದಾಗಿ ಕೂದಲಿನ ಉತ್ಪನ್ನಗಳಿಗೆ ಮಾದರಿಯಾಗಿದ್ದಳು. ಆದರೆ ಸಲೂನ್ ಮಾಡಿದ ತಪ್ಪಿನಿಂದಾಗಿ ಅವರು ಕೂದಲನ್ನು ಕಳೆದುಕೊಂಡು ತಮ್ಮ ನಿರೀಕ್ಷಿತ ನೇಮಕಗಳನ್ನು ಕಳೆದುಕೊಂಡರು ಮತ್ತು ಭಾರಿ ನಷ್ಟ ಅನುಭವಿಸಿದರು, ಉನ್ನತ ಮಾಡೆಲ್ ಆಗಬೇಕೆಂದು ಅವರ ಕನಸನ್ನು ನುಚ್ಚುನೂರು ಮಾಡಿತು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೂರುದಾರರು ಮುಖ್ಯವಾಗಿ ಕೂದಲಿನ ಉತ್ಪನ್ನಗಳಿಗೆ ಸಂಬಂಧಿಸಿದ ತನ್ನ ಮಾಡೆಲಿಂಗ್ ಅಸೈನ್ ಮೆಂಟ್ ಗಳನ್ನು ಮುಂದುವರಿಸಲು ಯೋಜಿಸುತ್ತಿದ್ದರು ಮತ್ತು ಅವರಿಗೆ ಚಲನಚಿತ್ರ ಪಾತ್ರವನ್ನು ಸಹ ನೀಡಲಾಯಿತು. ಇದು ಅವರ ಆದಾಯದ ಮೂಲ ವಾಗಿತ್ತು.
ಒಮ್ಮೆ ದೆಹಲಿ ಮೂಲದ ಹೋಟೆಲ್ನ ಸಲೂನ್ಗೆ ಹೇರ್ಕಟ್ಗೆ ಭೇಟಿ ನೀಡಿದ್ದ ಅವರು, ಹೇಗೆ ಕೇಶ ವಿನ್ಯಾಸ ಮಾಡಬೇಕೆಂದು ಹೇರ್ ಡ್ರೆಸ್ಸರ್ಗೆ ಸೂಚನೆ ನೀಡಿದ್ದರು. ಆದರೆ ಹೇರ್ ಡ್ರೆಸ್ಸರ್ ಆಶ್ನಾ ರಾಯ್ ನೀಡಿದ್ದ ಸೂಚನೆಯನ್ನು ಕಡೆಗಣಿಸಿ, ತನಗಿಷ್ಟ ಬಂದಂತೆ ಹೇರ್ಕಟ್ ಮಾಡಿದ್ದನು ಎನ್ನಲಾಗಿದೆ. ಇದಾದ ನಂತರ ಆಕೆ, ಅಲ್ಲಿನ ಮ್ಯಾನೇಜ್ಮೆಂಟ್ಗೆ ದೂರು ನೀಡಿದ್ದಳು.
ಚಿಕಿತ್ಸೆಯ ನಂತರ ಆಕೆಯ ತಲೆಕೂದಲಿನಲ್ಲಿ ಸಾಕಷ್ಟು ಬದಲಾವಣೆಯಾಯಿತು, ಅಮೋನಿಯಾದ ಹೆಚ್ಚಳದಿಂದಾಗಿ ತಲೆ ಕೂದಲು ಉದುರಲು ಆರಂಭ ವಾಯಿತು. ವೈದ್ಯರ ತಪ್ಪಿನಿಂದಾಗಿ ಆಕೆ ಮಾಡೆಲಿಂಗ್ ಅನ್ನು ತೊರೆಯಬೇಕಾಯಿತು.