2021ರ ಅಂತ್ಯದಲ್ಲಿ 74.33 ರೂ. ಇದ್ದ ಡಾಲರ್ (USD) ಮೌಲ್ಯ 2022ರ ಅಂತ್ಯದ ವೇಳೆಗೆ 82.75 ರೂಪಾಯಿವರೆಗೆ ಏರಿಕೆ ಕಂಡಿದೆ.
ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ತೈಲ ಬೆಲೆಯಲ್ಲಿ ಏರಿಳಿತಗಳಿಂದಾಗಿ ರೂಪಾಯಿ ಮೌಲ್ಯ ಕುಸಿತವಾಯಿತು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು. ಸದ್ಯ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು 81.50 ರೂ. ನಿಂದ 83.50 ರೂ. ನಡುವೆ ಇರಲಿದೆ.
ರೂಪಾಯಿ ಮೌಲ್ಯಯುತವಾಗಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವ ಹಾರಗಳೆಲ್ಲವೂ ಡಾಲರ್ ಮೂಲಕ ನಡೆಯುವುದರಿಂದ ರೂಪಾಯಿ ಆಯ್ಕೆಯಾಗುವು ದಿಲ್ಲ. ಆದರೆ ಭಾರತೀಯ ಶೇರುಗಳಲ್ಲಿ ವಹಿವಾಟನ್ನು ಮುಂದುವರಿಸಿದರೆ, ರೂಪಾಯಿ ಮೌಲ್ಯ ಸ್ಥಿರವಾಗಲಿದೆ ಎಂದು ಒಸಿಬಿಸಿ ಬ್ಯಾಂಕ್ನ ಎಫ್ಎಕ್ಸ್ ತಂತ್ರಜ್ಞ ಕ್ರಿಸ್ಟೋಫರ್ ವಾಂಗ್ ಹೇಳಿದ್ದಾರೆ.
Read E-Paper click here