Saturday, 23rd November 2024

ಡಾಲರ್ ಎದುರು ರೂಪಾಯಿ ಚೇತರಿಕೆ

ನವದೆಹಲಿ: ಯುಎಸ್‌ ಡಾಲರ್ ಎದುರು ರೂಪಾಯಿ ಕೊಂಚ ಚೇತರಿಕೆ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 12 ಪೈಸೆ ಏರಿಕೆ ಕಂಡು ರೂಪಾಯಿ 77.93ಕ್ಕೆ ತಲುಪಿದೆ.

ಮಾರುಕಟ್ಟೆಯಲ್ಲಿ ಡಾಲರ್ ಎದುರಲ್ಲಿ ಕೊಂಚ ಏರಿಕೆಯೊಂದಿಗೆ ಭಾರತೀಯ ರೂಪಾಯಿ ವಹಿವಾಟು ಆರಂಭ ಮಾಡಿದೆ. ಆರಂಭಿಕವಾಗಿ ರೂಪಾಯಿ 77.98ರಲ್ಲಿ ವಹಿವಾಟು ನಡೆಸಿದ್ದು ಬಳಿಕ 77.93ಕ್ಕೆ ತಲುಪಿದೆ.

ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿದೆ. ಕೊನೆಯ ವಹಿವಾಟಿನಲ್ಲಿ ಸುಮಾರು ಐದು ಪೈಸೆ ರೂಪಾಯಿ ಮೌಲ್ಯ ಇಳಿಕೆ ಕಂಡು ರೂಪಾಯಿ 78.05 ಆಗಿತ್ತು.

ಜಾಗತಿಕ ತೈಲಬೆಲೆಯ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.26 ರಷ್ಟು ಕುಸಿತ ಕಂಡು ಪ್ರತಿ ಡಾಲರ್‌ಗೆ 112.83 ಡಾಲರ್ ಇಳಿಕೆಯಾಗಿದ್ದು ರೂಪಾಯಿ ಬಲಗೊಳ್ಳಲು ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈ ಹಿಂದಿನ ವಹಿವಾಟಿನಲ್ಲಿ 77.93ಕ್ಕೆ ತಲುಪಿ ವಹಿವಾಟು ಅಂತ್ಯ ಮಾಡಿದ್ದ ರೂಪಾಯಿ, ಸೋಮವಾರ 78ರ ಗಡಿ ದಾಟಿದೆ.