Thursday, 3rd October 2024

ರಷ್ಯಾದ ಮಹಿಳೆ ಮೇಲೆ ಸಿಂಗಪುರದ ವ್ಯಕ್ತಿಯಿಂದ ಅತ್ಯಾಚಾರ

ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸಿಂಗಪುರದ ವ್ಯಕ್ತಿಯೊಬ್ಬ ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ದ್ದಾನೆ ಎಂದು ವರದಿಯಾಗಿದೆ.

ಆರೋಪಿ ಅಲೆಕ್ಸಾಂಡರ್ ಲೀ ಜಿಯಾ ಜುನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಮನಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಜುನ್ ತನ್ನ ಕೋಣೆಗೆ ಕರೆದು ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಷ್ಯಾ ಮಹಿಳೆಯು ತನ್ನ ತಾಯಿಯೊಂದಿಗೆ ಮನಾಲಿಯಲ್ಲಿ ನೆಲೆಸಿದ್ದಾರೆ.