Friday, 13th December 2024

ಪೊಲೀಸರಿಗೆಲ್ಲ ಭಯಪಡಬೇಡಿ, ಅಗತ್ಯ ಬಿದ್ದರೆ ಬಾಂಬ್​ ಹಾಕಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಸುಭ್ರತಾ ದತ್ತಾ, ‘ನೀವು ಪೊಲೀಸರಿಗೆಲ್ಲ ಭಯಪಡಬೇಡಿ. ಅಗತ್ಯ ಬಿದ್ದರೆ ಅವರ ಮೇಲೆ ಬಾಂಬ್​ ಹಾಕಿ. ಬುಲೆಟ್​​ಗಳಿಂದ ಪೊಲೀಸರ ದೇಹವನ್ನು ರಂಧ್ರ ಮಾಡಿ’ ಎಂದು ಕರೆ ನೀಡಿದ್ದಾರೆ.

‘ಅಭಿಷೇಕ್​ ಬ್ಯಾನರ್ಜಿ ಸೆಪ್ಟೆಂಬರ್​​ನಲ್ಲಿ, ಪ್ರತಿಭಟನೆ ಸಂದರ್ಭ ಯಾರು ಪೊಲೀಸ್​ ವಾಹನಕ್ಕೆ ಬೆಂಕಿ ಇಡುವುದು, ಧ್ವಂಸ ಮಾಡುವುದು ಮಾಡುತ್ತಾರೋ, ಅಂಥವರ ತಲೆಗೆ ಗುಂಡು ಹೊಡೆಯಬೇಕು’ ಎಂದು ಹೇಳಿದ್ದರು.

‘ಅಭಿಷೇಕ್​ ಬ್ಯಾನರ್ಜಿ ಹೇಳುತ್ತಾರೆ, ಪೊಲೀಸರ ವಾಹನ ಮುಟ್ಟಿದವರ ಹಣೆಗೆ ಗುಂಡು ಹೊಡೆಯಬೇಕು ಎಂದು. ಆದರೆ ನಾನು ಪೊಲೀಸರ ಇಡೀ ದೇಹಕ್ಕೆ ಗುಂಡು ಹಾರಿಸಬಲ್ಲೆ. ಅವರ ದೇಹವನ್ನು ಗುಂಡುಗಳಿಂದ ರಂಧ್ರ ಮಾಡಬಲ್ಲೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ನೀವೂ ಹೀಗೆ ಮಾಡಿ’ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಕಾಂಗ್ರೆಸ್​ ನಾಯಕಿ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್​ ನಾಯಕ, ಸಚಿವ ಫಿರ್ಹಾದ್​ ಹಕೀಮ್​ ಖಂಡಿಸಿದ್ದಾರೆ. ಈ ವಿಡಿಯೊ ವನ್ನು ಪೊಲೀಸರ ಗಮನಕ್ಕೆ ತಂದು, ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.