Saturday, 14th December 2024

Sabarimala Temple: ಶಬರಿಮಲೆ ಪ್ರಸಾದದಲ್ಲೂ ಕ್ರಿಮಿನಾಶಕ; 6.65 ಲಕ್ಷ ಕಂಟೈನರ್ ಪ್ರಸಾದ ಗೊಬ್ಬರಕ್ಕೆ!

sabarimala prasada

ಶಬರಿಮಲೆ: ತಿರುಪತಿ ತಿಮ್ಮಪ್ಪ ದೇವಾಲಯದ ಲಡ್ಡು (Tirupati laddu) ಪ್ರಸಾದದಲ್ಲಿ ಕಳಪೆ ತುಪ್ಪ ಹಾಗೂ ಪ್ರಾಣಿ ಕೊಬ್ಬು (Beef fat) ಬೆರೆಸಿದ ವಿಚಾರ ತಣ್ಣಗಾಗುವ ಮುನ್ನವೇ ಮತ್ತೊಂದು ಅಂಥದೇ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ದೇಶದ ಮತ್ತೊಂದು ಪ್ರಮುಖ ದೇವಸ್ಥಾನ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರಸಾದದಲ್ಲಿ (Sabarimala Ayyappa Swami Prasadam) ಅಪಾಯಕಾರಿ ಪ್ರಮಾಣದ ಕ್ರಿಮಿನಾಶಕ (Pesticide) ಕಂಡುಬಂದಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪ್ರಸಾದವನ್ನು ಭಕ್ತಾದಿಗಳಿಗೆ ಕಂಟೈನರ್‌ಗಳಲ್ಲಿ ನೀಡಲಾಗುತ್ತದೆ. ಕಳೆದ ವರ್ಷದ ಪ್ರಸಾದದಲ್ಲಿ ಅಪಾಯಕಾರಿ ಪ್ರಮಾನದ ಕೀಟನಾಶಕ ಕಂಡುಬಂದಿದೆ. ಹೀಗಾಗಿ ಕಳೆದ ವರ್ಷದ 6.65 ಲಕ್ಷ ಪ್ರಸಾದದ ಕಂಟೈನರ್‌ಗಳನ್ನು ಬಳಕೆಯಿಂದ ಕೈಬಿಡಲಾಗಿದೆ. ಈ ಕಲುಷಿತ ಪ್ರಸಾದವನ್ನು ಗೊಬ್ಬರವಾಗಿ ವಿಲೇವಾರಿ ಮಾಡಲು ಆಡಳಿತ ಮಂಡಳಿ ಮುಂದಾಗಿದೆ.

ಈ ಪ್ರಸಾದವನ್ನು ಕಳೆದ ವರ್ಷದಿಂದ ಬಳಕೆ ಮಾಡದೆ ನಿಲ್ಲಿಸಲಾಗಿದೆ. ಪ್ರಸಾದದಲ್ಲಿ ಬಳಸುವ ಏಲಕ್ಕಿಯಲ್ಲಿ ಅಪಾಯಕಾರಿ ಪ್ರಮಾಣದ ಕೀಟನಾಶಕದ ಅಂಶ ಕಂಡುಬಂದಿತ್ತು. ಹೀಗಾಗಿ ಈಗ ಪ್ರಸಾದದ ತಯಾರಿಕೆಯಲ್ಲಿ ಬಳಸುತ್ತಿದ್ದ ಏಲಕ್ಕಿ ಬಳಕೆಯನ್ನು ಕೈಬಿಡಲಾಗಿದೆ. ಈ ಪ್ರಸಾದಗಳಿಗೆ ಸಂಬಂಧಿಸಿದಂತೆ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಟಿಡಿಬಿ ಈ ಪ್ರಸಾದಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಟೆಂಡರ್ ಆಹ್ವಾನಿಸಿದೆ. ಇಂಡಿಯನ್ ಸೆಂಟ್ರಿಫ್ಯೂಜ್ ಇಂಜಿನಿಯರಿಂಗ್ ಸಲ್ಯೂಷನ್ಸ್ ಇದರ ಟೆಂಡರ್ ಪಡೆದಿದ್ದು, ಕಲುಷಿತ ಪ್ರಸಾದವನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದಾಗಿ ಟಿಡಿಬಿ ಅಧ್ಯಕ್ಷ ಪ್ರಶಾಂತ್ ಹೇಳಿದ್ದಾರೆ.

ಇದನ್ನೂ ಓದಿ: Sabarimala temple: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ!