Friday, 13th December 2024

ಶಬರಿಮಲೆ ದರ್ಶನ ಇಂದು, ದಿನಕ್ಕೆ ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ

ಕೇರಳ: ಮಂಡಲ ಪೂಜೆಯೊಂದಿಗೆ ಶಬರಿ ಮಲೆ ಯಾತ್ರೆ ಪ್ರಾರಂಭವಾಗಲಿದೆ. ಮಂಡಲ ಪೂಜಾ ಉತ್ಸವಕ್ಕಾಗಿ ಭಾನುವಾರ ಸಂಜೆ ದೇವಸ್ಥಾನದ ಮುಖ್ಯ ಅರ್ಚಕ ಎ.ಕೆ.ಸುದೀರ್ ನಂಬೂದರಿ ಅವರು ಶಬರಿಮಲೆ ದೇವಸ್ಥಾನದ ಗರ್ಭಗುಡಿಯನ್ನು ತಂತ್ರಿ ಗಳಾದ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ತೆರೆಯಲಿದ್ದಾರೆ.

ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿ ಮತ್ತು ಮಲಿಕಾಪ್ಪುರಂ, ಮುಖ್ಯ ಅರ್ಚಕ ಎಂ.ಎನ್.ರಾಜಿ ಕುಮಾರ್ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಸೋಮವಾರ ವೃಶ್ಚಿಕದ ಮೊದಲ ದಿನ ದೇವಸ್ಥಾನದಲ್ಲಿ ಸಾಂಪ್ರದಾಯಗಳನ್ನು ನೆರವೇರಿಸಲಿದ್ದಾರೆ. ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಸ್ಥಾನಕ್ಕೆ ಹೋಗುವುದಕ್ಕೆ 24 ಗಂಟೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಇದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.