ನವದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಕೋರ್ಟ್ ನ ಒಳಗೇ ಮಹಿಳೆಯೊಬ್ಬರಿಗೆ ಶೂಟ್ ಮಾಡಲಾಗಿದೆ.
ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿಯೇ ಕೋರ್ಟ್ ಆವರಣದಲ್ಲಿ ಇದ್ದ ಪೊಲೀಸ್ ಅಧಿಕಾರಿ, ಮತ್ತಿತರರು ಸೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಣಕಾಸಿಗೆ ಸಂಬಂಧಪಟ್ಟ ಯಾವುದೋ ಕೇಸ್ನ ವಿಚಾರಣೆಗಾಗಿ ಈ ಮಹಿಳೆ ಕೋರ್ಟ್ಗೆ ಬಂದಿದ್ದರು.
2021ರ ಸೆಪ್ಟೆಂಬರ್ 24ರಂದು ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.
ಇಬ್ಬರು ಶೂಟರ್ಗಳು, ಲಾಯರ್ಗಳಂತೆ ಡ್ರೆಸ್ ಧರಿಸಿಕೊಂಡು ಬಂದು ಕೋರ್ಟ್ ಒಳಗೆ ಗುಂಡು ಹಾರಿಸಿದ್ದರು. ಅಂದು ಗ್ಯಾಂಗ್ಸ್ಟರ್ ಜಿತೇಂದರ್ ಮಾನ್ ಅಲಿಯಾಸ್ ಗೋಗಿ ಎಂಬಾತನ ವಿಚಾ ರಣೆ ನಡೆಯುತ್ತಿತ್ತು. ಅದೇ ವೇಳೆ ಆಗಮಿಸಿದ್ದ ಶೂಟರ್ಗಳಾದ ರಾಹುಲ್ ತ್ಯಾಗಿ ಮತ್ತು ಜಗದೀಪ್ ಜಗ್ಗಾ ಎಂಬುವರು ಗೋಗಿ ಮೇಲೆ ಒಂದೇ ಸಮನೆ ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಇವರಿಬ್ಬರನ್ನೂ ಪೊಲಿಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.