Tuesday, 10th September 2024

Salil Kapoor : ಅಟ್ಲಾಸ್‌ ಸೈಕಲ್‌ ಕಂಪನಿಯ ಮಾಜಿ ಅಧ್ಯಕ್ಷ ಗುಂಡು ಹೊಡೆದುಕೊಂಡು ಆತ್ಮಹತ್ಯೆ

Salil Kapoor

ನವದೆಹಲಿ: ಅಟ್ಲಾಸ್ ಸೈಕಲ್ಸ್‌ ಕಂಪನಿ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮಧ್ಯಾಹ್ನ 2.30 ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಪೂರ್ ಅವರ ಮನೆಯಿಂದ ಆತ್ಮಹತ್ಯೆ ಪತ್ರವನ್ನು ಸಹ ವಶಪಡಿಸಿಕೊಂಡಿದ್ದಾರೆ. ಕಪೂರ್ ತನ್ನ ಮೂರು ಅಂತಸ್ತಿನ ಮನೆಯ ಪೂಜಾ ಕೊಠಡಿಯ ಪ್ರದೇಶದಲ್ಲಿ ಕುಳಿತುಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಪತ್ತೆ ಮಾಡಿದ ಒಂದು ಪುಟದ ಆತ್ಮಹತ್ಯೆ ಪತ್ರದಲ್ಲಿ, ಕಪೂರ್ ಕೆಲವು ಜನರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. “ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ಅವರು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ್ ತಂಡವಿದೆ. ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಲವರ ವಿರುದ್ಧ ಕಿರುಕುಳದ ಆರೋಪಗಳನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಕಪೂರ್ ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರು.  ಅವರು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರು. ಅವರು ತಮ್ಮ ಹೆಂಡತಿಗೆ ವಿಚ್ಛೇದನ ನೀಡಿದ್ದರು ಮತ್ತು ಅವರ ಮಕ್ಕಳು ಸಹ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2015 ರಲ್ಲಿ, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಸಲೀಲ್ ಕಪೂರ್ ಅವರನ್ನು ಉತ್ತರಾಖಂಡದಿಂದ 9 ಕೋಟಿ ರೂ.ಗಳ ವಂಚನೆಯ ಎರಡು ಪ್ರಕರಣಗಳಲ್ಲಿ ಬಂಧಿಸಿತ್ತು.

ಈ ಸುದ್ದಿಯನ್ನೂ ಓದಿ: PM Modi Brunei Visit : ಬ್ರೂನೈನ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಮೊದಲ ಪ್ರಕರಣದಲ್ಲಿ ಸತೀಂದರ್ ನಾಥ್ ಮೈರಾ ಎಂಬ ವ್ಯಕ್ತಿ ಸಲೀಲ್ ಕಪೂರ್ ಅವರ ಕುಟುಂಬ ಸ್ನೇಹಿತ ಪ್ರಶಾಂತ್ ಕಪೂರ್ ಅವರಿಗೆ ಹೂಡಿಕೆ ಮಾಡಲು 13 ಕೋಟಿ ರೂ.ಗಳನ್ನು ನೀಡಿದ್ದೇನೆ ಎಂದು ಆರೋಪಿಸಿದ್ದರು. ಹಿಂದಿರುಸುವಂತೆ ಕೇಳಿದಾಗ, ಸಲೀಲ್ ಏಳು ಪೋಸ್ಟ್-ಡೇಟೆಡ್ ಚೆಕ್‌ಗಳನ್ನು ನೀಡಿದ್ದರು. ಆದರೆ ಎಲ್ಲವನ್ನೂ ಬೌನ್ಸ್‌ ಆಗಿದ್ದವು.  ಸಲೀಲ್ ತನಗೆ 4 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಸುನೀತಾ ಬನ್ಸಾಲ್ ಎಂಬ ಮಹಿಳೆ ದೂರು ನೀಡಿದ ನಂತರ ಅಟ್ಲಾಸ್ ಸೈಕಲ್ಸ್ ಮಾಜಿ ಅಧ್ಯಕ್ಷರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *