Wednesday, 11th December 2024

Salman Khan: ಹಳೆಯ ಕಹಿ ನೆನಪು ಮರೆತು ಮಲೈಕಾ ಮನೆಗೆ ಭೇಟಿ ನೀಡಿದ ಸಲ್ಮಾನ್ ಖಾನ್

Salman Khan

ಮುಂಬಯಿ: ಬಾಲಿವುಡ್‌ ನಟಿ (Bollywood actress) ಮಲೈಕಾ ಅರೋರಾ (Malaika Arora) ಅವರ ತಂದೆ ಗುರುವಾರ ಬಾಂದ್ರಾದಲ್ಲಿರುವ (bandra) ತಮ್ಮ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಸೆಲೆಬ್ರಿಟಿಗಳು ಅವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಕೂಡ ಅವರ ನಿವಾಸಕ್ಕೆ ಹೋಗಿ ಸಮಾಧಾನ ಹೇಳಿರುವುದು ವಿಶೇಷ ಎನಿಸಿದೆ. ಯಾಕೆಂದರೆ ಕುಟುಂಬ ಕಹಿ ನೆನಪುಗಳನ್ನು ಬದಿಗಿಟ್ಟು ಸಲ್ಮಾನ್ ಖಾನ್ (Salman Khan) ರಾತ್ರಿ ಅವರ ಮನೆಗೆ ತೆರದ್ದಾರೆ.

ಮಲೈಕಾ ಅರೋರಾ ಅವರ ತಂದೆಯ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್‌ನ ಹಲವಾರು ಮಂದಿ ಆಘಾತ ವ್ಯಕ್ತಪಡಿಸಿದ್ದರು. ಈ ದುರಂತ ಮಲೈಕಾ ಅರೋರಾ ಮತ್ತು ಅವರ ಕುಟುಂಬಕ್ಕೂ ದೊಡ್ಡ ಆಘಾತ ತಂದಿದೆ. ಈ ಸಂದರ್ಭದಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ತಮ್ಮ ಬೆಂಬಲ ಮತ್ತು ಸಾಂತ್ವನ ನೀಡಲು ಮಲೈಕಾ ಮನೆಗೆ ಭೇಟಿ ನೀಡುತ್ತಿದ್ದಾರೆ.

Salman Khan

ನಟ ಸಲ್ಮಾನ್ ಖಾನ್ ಕೂಡ ಗುರುವಾರ ರಾತ್ರಿ ಮಲೈಕಾ ಮನೆಗೆ ತೆರಳಿ ಅವರನ್ನು ಭೇಟಿಯಾಗಿದ್ದರು. ಹಿಂದಿನ ಕೋಪ ಮರೆತು ಮಲೈಕಾ ಮನೆಗೆ ಭೇಟಿ ಸಲ್ಲು ಭೇಟಿ ನೀಡಿರುವುದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ತಡರಾತ್ರಿ ಸಲ್ಮಾನ್ ಮಲೈಕಾ ಮನೆಗೆ ಬಂದಿದ್ದು, ಕಾರಿನಿಂದ ಇಳಿದು ನೇರವಾಗಿ ಮನೆಯೊಳಗೆ ಸಾಗಿದರು. ಈ ವೇಳೆ ಸಲ್ಲು ಮುಖದಲ್ಲಿ ದುಃಖ ಎದ್ದು ಕಾಣುತ್ತಿತ್ತು.

ಏನು ಹಳೆ ಬೇಸರ

2017ರಲ್ಲಿ ಸಲ್ಮಾನ್ ಸಹೋದರ ಅರ್ಬಾಜ್ ಖಾನ್‌ಗೆ ಮಲೈಕಾ ಅರೋರಾ ವಿಚ್ಛೇದನ ನೀಡಿದ್ದರು. ಬಳಿಕ ಮಲೈಕಾ ಬಗ್ಗೆ ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಎಲ್ಲೂ ಮಾತನಾಡಿಲ್ಲ. ಆದರೂ ಮಲೈಕಾ ತಂದೆಯ ನಿಧನದ ಸುದ್ದಿ ತಿಳಿದು ಸಲ್ಮಾನ್ ಹಿಂದಿನ ಕೌಟುಂಬಿಕ ಬೇಸರಗಳನ್ನು ಬದಿಗಿಟ್ಟು ಅವರ ಮನೆಗೆ ತೆರಳಿದ್ದರು.

ಸಲ್ಮಾನ್ ಒಳ್ಳೆಯ ನಡೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ನೆಟಿನ್‌ಗಳು ಸಲ್ಮಾನ್ ಮತ್ತು ಅವರ ಸಂಪೂರ್ಣ ಖಾನ್ ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು “ಕುಟುಂಬವೆಂದರೆ ಹೀಗಿರಬೇಕು” ಎಂದು ಕಾಮೆಂಟ್ ಮಾಡಿ ಸಲ್ಮಾನ್ ಅವರನ್ನು ಹೊಗಳಿದ್ದಾರೆ.

ಮಲೈಕಾ ಅರೋರಾ ಅವರ ತಂದೆ ಅನಿಲ್‌ ಅರೋರಾ ಆತ್ಮಹತ್ಯೆಯ ಸುದ್ದಿ ಕೇಳಿ ಮಲೈಕಾ ಮಾಜಿ ಪತಿ ಅರ್ಬಾಜ್‌ ಖಾನ್‌ ಕೂಡ ಅಲ್ಲಿಗೆ ತೆರಳಿ ಅಗತ್ಯ ನೆರವು ನೀಡಿದ್ದರು.

Malaika Arora Father: ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವು

ಅರ್ಬಾಜ್‌ ಖಾನ್‌ ಜೊತೆ ವಿಚ್ಛೇದನ ಪಡೆದ ಬಳಿಕ ಮಲೈಕಾ ಅರ್ಜುನ್​ ಕಪೂರ್ ಜತೆಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ ನಲ್ಲಿದ್ದರು. ಇದೀಗ ಅವರು ತಮ್ಮ ಪ್ರೇಮ ಸಂಬಂಧ ಕೊನೆಗೊಳಿಸಿದ್ದಾರೆ ಎನ್ನಲಾಗುತ್ತಿದೆ.