Tuesday, 10th December 2024

Lawrence Bishnoi : ಸಲ್ಮಾನ್‌ ಖಾನ್‌ ಮುಟ್ಟಿದರೆ ತಲೆ ಹಾರಿಸುತ್ತೇನೆ; ವಿಡಿಯೊ ಮೂಲಕ ಗ್ಯಾಂಗ್‌ಸ್ಟರ್‌ ಬಿಷ್ಣೋಯ್‌ಗೇ ಬೆದರಿಕೆ!

Salman Khan-Lawrence Bishnoi controversy

ಮುಂಬೈ : ಸಲ್ಮಾನ್‌ ಖಾನ್‌ಗೆ ಕೊಲ್ಲುವುದಾಗಿ (Salman Khan-Lawrence Bishnoi controversy ) ಜೀವ ಬೆದರಿಕೆ ಹಾಕಿದ್ದ ಲಾರೆನ್ಸ್‌ ಬಿಷ್ಣೋಯಿಗೆ ( Lawrence Bishnoi) ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ವಿಡಿಯೊ ಮಾಡಿ ಹೆದರಿಕೆ ಹಾಕಿರು ಆತ ಸಲ್ಮಾನ್‌ ಖಾನ್‌ಗೆ ಎನಾದರೂ ಆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಬಳಿ 5000 ಶೂಟರ್‌ಗಳಿದ್ದಾರೆ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾನೆ. ಬೆದರಿಕೆ ಹಾಕಿರುವ  ವ್ಯಕ್ತಿ ಉತ್ತರ ಪ್ರದೇಶದವ( UP) ಎಂದು ಗುರುತಿಸಲಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಡಿಯೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ಗೆ (Lawrence Bishnoi) ಬೆದರಿಕೆ ಹಾಕಿರುವ ವ್ಯಕ್ತಿ “ನೀವು ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಲ್ಮಾನ್‌ಗೆ ಏನಾದರೂ ಆದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಬಳಿ 2,000 ಶೂಟರ್‌ಗಳಿದ್ದರೆ ನಮ್ಮ ಬಳಿ 5,000 ಸಾವಿರ ಶೂಟರ್‌ಗಳಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾನೆ.

ವ್ಯಕ್ತಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ವೈರಲ್‌ ಆಗುತ್ತಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸರು ವಿಡಿಯೋದಲ್ಲಿರುವ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

ಹಲವು ವರ್ಷಗಳಿಂದ ಸಲ್ಮಾನ್‌ ಖಾನ್‌ ಮೇಲೆ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್‌ ಗ್ಯಾಂಗ್‌ ಹಲವು ಬಾರಿ ಕೊಲ್ಲುವ ಬೆದರಿಕೆ ಹಾಕಿದೆ. 1998 ರಲ್ಲಿ ಹಮ್‌ ಆಪ್ಕೇ ಹೇ ಕೌನ್‌ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ರಾಜಾಸ್ಥಾನದ ಜೋಧ್‌ಪುರದಲ್ಲಿ ಸಲ್ಮಾನ್‌ ಖಾನ್‌ ಕೃಷ್ಣ ಮೃಗ ಬೇಟೆಯಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಿಷ್ಣೋಯ್‌ ಸಮಾಜದ ಪವಿತ್ರ ಎಂದು ಪರಿಗಣಿಸಲಾದ ಕೃಷ್ಣ ಮೃಗ ಬೇಟೆಗೆ ಇಡೀ ಬಿಷ್ಣೋಯ್‌ ಸಮಾಜ ವಿರೋಧ ವ್ಯಕ್ತ ಪಡಿಸಿತ್ತು. ಲಾರೆನ್ಸ್‌ ಬಿಷ್ಣೋಯಿ ಮತ್ತು ಗ್ಯಾಂಗ್‌ ಈ ಪ್ರಕರಣದ ಬಳಿಕ ಹಲವು ಬಾರಿ ಸಲ್ಮಾನ್‌ ಖಾನ್‌ ಹತ್ಯೆಗೆ ಪ್ರಯತ್ನ ಪಟ್ಟಿದ್ದರು.

ಇದನ್ನೂ ಓದಿ : Lawrence Bishnoi: ಸಲ್ಮಾನ್ ಕ್ಷಮೆಗೆ ಒತ್ತಾಯಿಸಿದ ಲಾರೆನ್ಸ್‌ ಬಿಷ್ಣೋಯ್ ಕುಟುಂಬ

ಇತ್ತೀಚೆಗೆ ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿದೆ. ಬಿಷ್ಣೋಯ್‌ ಗ್ಯಾಂಗ್‌ನ ಶೂಟರ್‌ಗಳು ಬಾಬಾ ಸಿದ್ಧಿಕಿಯನ್ನು ಮುಂಬೈನ ಅವರ ಮಗನ ಕಚೇರಿಯ ಎದುರಿನಲ್ಲಿಯೇ ಹತ್ಯೆ ಮಾಡಿದ್ದರು. ಆ ಘಟನೆಯ ಬಳಿಕ ಅವರ ಆಪ್ತ ಸಲ್ಮಾನ್‌ ಖಾನ್‌ಗೂ ಬೆದರಿಕೆ ಬಂದಿತ್ತು. ಮುಂಬೈ ಟ್ರಾಫಿಕ್‌ ಪೊಲೀಸರ ಸಂಚಾರ ಸಹಾಯವಾಣಿಗೆ ಬೆದರಿಕೆ ಬಂದಿದ್ದು ಸಲ್ಮಾನ್‌ ಬಿಷ್ಣೋಯ್‌ ಸಮಾಜದವರ ಬಳಿ ಕ್ಷಮೆ ಕೇಳಬೇಕು ಇಲ್ಲವಾದರೆ ಅವರನ್ನು ಬಾಬಾ ಸಿದ್ಧಿಕಿಯ ರೀತಿಯೇ ಹೊಡೆದು ಹಾಕಲಾಗವುದು ಎಂದು ಹೇಳಿದ್ದರು . ನಂತರ ಮುಂಬೈ ಪೊಲೀಸರು ಬೆದರಿಕೆ ಹಾಕಿದ್ದ ಜಾರ್ಖಂಡ್‌ ಮೂಲದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.