ಗಣೇಶ, ವಿನಾಯಕ, ಪಿಳ್ಳಯಾರ್, ಗಣಪತಿ: ಆ ದೇವನನ್ನು ಯಾವುದೇ ಹೆಸರಿನಿಂದ ಕರೆಯಿರಿ, ಆದರೆ ನಮ್ಮ ಬದುಕು ಹಾಗೂ ಕೆಲಸಗಳಿಗೆ ವಿಘ್ನಗಳು ಬಾರದಂತೆ ಪ್ರಪ್ರಥಮವಾಗಿ ಪೂಜಿಸುವ ಭಗವಂತ ಆತನೇ. ಅದೇ ರೀತಿ ಗಣೇಶನ ಹಬ್ಬ ಕೂಡ ನಿರ್ವಿಘ್ನವಾಗಿ ನಡೆಯುವುದನ್ನು ಅಪೇಕ್ಷಿಸುವುದು ಸಹಜ ವಲ್ಲವೇ?
ತಥಾಸ್ತು. ಹಾಗೆಯೇ ಹಬ್ಬ ನಡೆಯಲಿದೆ!
ಈ ಹಬ್ಬವನ್ನು ವಿಶೇಷವಾಗಿ ಆಚರಿಸಲು ಪೂಜಾ ಎನ್ ಪೂಜಾರಿ (Puja N Pujari) ನಿಮಗಾಗಿ ಹೊಸ ಅವಕಾಶ ತಂದಿದೆ. ನೀವು ಗಣೇಶನಿಗೆ ಭಕ್ತಿಯಿಂದ ಸಮರ್ಪಿಸುವಂತಹ ಎಲ್ಲವನ್ನೂ ಗಣೇಶ ಹಬ್ಬದ ಸುಸಜ್ಜಿತ ಹ್ಯಾಂಪರ್ ಒಳಗೊಂಡಿದೆ. ಪರಿಸರ ಸ್ನೇಹಿ ಗಣಪನ ಮೂರ್ತಿ, ಪೂಜಾ ಸಾಮಗ್ರಿಗಳಾದ ಹೂವು, ಪ್ರಾರ್ಥನಾ ಪುಸ್ತಕ, ಅಗರಬತ್ತಿ ಹಾಗೂ ಇತರೆ ವಸ್ತುಗಳನ್ನು ಈ ಗಣೇಶ ಗಿಫ್ಟ್ ಬಾಕ್ಸ್ ಹೊಂದಿದೆ. ನೀವು ಹಬ್ಬವನ್ನು ಸ್ವಾಗತಿಸಿದರೆ ಸಾಕು.
ಆಧುನಿಕ ಜೀವನ ಶೈಲಿಯು ಅನೇಕ ಆದ್ಯತೆ ಹಾಗೂ ಸಮಯದ ಮಿತಿ ಹೊಂದಿದೆ ಎಂಬುದನ್ನು ಪೂಜಾ ಎನ್ ಪೂಜಾರಿ ಅರಿತುಕೊಂಡಿದೆ. ಹಿಂದೂಗಳು ಜೀವನದ ಜೊತೆಜೊತೆಗೆ ತಮ್ಮ ಸಂಸ್ಕೃತಿ ಹಾಗೂ ಧರ್ಮದ ಜೊತೆ ಬೆಸುಗೆ ಹೊಂದಿರುತ್ತಾರೆ. ಹಾಗೆಯೇ ಈ ಗುರುತು ಹಿಂದೂಗಳಿಗೆ ಬಹಳ ಮುಖ್ಯ. ಆದ್ದರಿಂದ ಇವುಗಳ ನಡುವೆ ಸಂಪರ್ಕ ಸೇತುವೆ ಕಲ್ಪಿಸಲು ಪೂಜಾ ಎನ್ ಪೂಜಾರಿ ನಿರ್ಧರಿಸಿದೆ.
ಹಬ್ಬಕ್ಕೆ ಸಿದ್ಧತೆ ಹಾಗೂ ಸಮನ್ವಯ ಮಾಡುವುದು ಹಿಂದೂಗಳಿಗಿರುವ ದೊಡ್ಡ ಸವಾಲು ಎಂಬುದನ್ನು ಪೂಜಾ ಎನ್ ಪೂಜಾರಿ ತಿಳಿದಿದೆ. ಪೂಜಾ ಸಾಮಗ್ರಿಗಳ ಅಲಭ್ಯತೆ, ಪೂಜಾರಿಗಳು ಸಿಗದೇ ಇರುವುದು ಹಬ್ಬದ ಆಚರಣೆಗೆ ತೊಡಕಾಗಬಹುದು. ಆದ್ದರಿಂದ ಪೂಜಾ ಸೇವೆ ಹಾಗೂ ಅರ್ಚಕರು ಒಂದೇ ಕಡೆಯಲ್ಲಿ ಸಿಗುವಂತಹ ಹೊಣೆಯನ್ನು ಈ ನವೋದ್ಯಮ ವಹಿಸಿಕೊಂಡಿದೆ. ನಿಮ್ಮ ಆಯ್ಕೆಯ ಭಾಷೆಯನ್ನು ಬಲ್ಲ ಅನುಭವಿ ಹಾಗೂ ಜ್ಞಾನಿಗಳಾದ ಪೂಜಾರಿಗಳು ಮತ್ತು ಪುರೋಹಿತರನ್ನು ಆಯ್ಕೆ ಮಾಡಲು ಇಲ್ಲಿ ಸಾಧ್ಯ. ವಿಶೇಷವಾಗಿ ಪ್ಯಾಕ್ ಮಾಡಿದ ಅಗರಬತ್ತಿ, ಕರ್ಪೂರ, ಹೂವು, ಮತ್ತಿತರ ಆರಾಧಾನಾ ಸಾಮಗ್ರಿಗಳನ್ನು ಇಲ್ಲಿ ಪಡೆಯಬಹುದು. ಈ ಎಲ್ಲವೂ ನಿಮ್ಮ ಆಯ್ಕೆಯ ಬಜೆಟ್‌ನಲ್ಲಿ ಲಭ್ಯ.
50 ಪ್ರಕಾರಗಳ ಸಾಮಾನ್ಯ ಹಾಗೂ ಅಪರೂಪದ ಸಂಭ್ರಮಾಚರಣೆಯ ಉತ್ಪನ್ನಗಳು www.pujanpujari.com ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿದೆ. ತಾಜಾತನ, ಪವಿತ್ರ ಹಾಗೂ ಪೂಜೆಗೆ ಸೂಕ್ತವಾಗಿರುವಂತೆ ಈ ಉತ್ಪನ್ನಗಳನ್ನು ನಿಗದಿತ ಮೂಲದಿಂದಲೇ ಪಡೆದು ಪ್ಯಾಕ್ ಮಾಡಲಾಗಿದೆ. ಗ್ರಾಹಕರಿಗೆ ಸೂಕ್ತವಾದ ಉತ್ಪನ್ನ ಹಾಗೂ ಸೇವೆಗಳು, ಕೈಗೆಟಕುವ ದರದಿಂದಾಗಿ ಪೂಜಾ ಎನ್ ಪೂಜಾರಿ ಎಲ್ಲಾ ಉತ್ಸವಗಳಿಗೆ ಉತ್ತಮ ಪರಿಹಾರವಾಗಿದೆ.
ಡಾ.ಮಹೇಶ್ ಕೊಟ್ಟಪಲ್ಲಿ, ಎಮ್‌ಡಿ ಮತ್ತು ಕಲ್ಪಜ ದಳವಾಯಿ ಆದಿಕೇಸವುಲು ಅವರು ಆರಂಭಿಸಿರುವ ಪೂಜ್ ಎನ್ ಪೂಜಾರಿ ಕಂಪನಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಅಮೆರಿಕದ ಟೆಕ್ಸಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಇನ್ನಷ್ಟು ನಗರಗಳು ಹಾಗೂ ವಿದೇಶಗಳಲ್ಲಿ ವಹಿವಾಟು ವಿಸ್ತರಿಸುವ ಗುರಿ ಹೊಂದಿದೆ.
ಪೂಜಾ ಎನ್ ಪೂಜಾರಿ ಇತರೆ ಸೇವೆಗಳನ್ನೂ ನೀಡುತ್ತದೆ: ಅವುಗಳಲ್ಲಿ ದೇವಸ್ಥಾನ ಸೇವೆ ಹಾಗೂ ಪ್ರಸಾದ ಪೂರೈಕೆ ಕೂಡ ಒಂದು. ಭಾರತದಿಂದ ಹೊರಗಿರುವ ಭಕ್ತರು ವೆಬ್‌ಸೈಟ್‌ನಿಂದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಬುಕಿಂಗ್ ಮಾಡಬಹುದು. ಜೊತೆಗೆ ತಾವು ಬಯಸಿದ ಸ್ಥಳಕ್ಕೆ ಪ್ರಸಾದವನ್ನು ತರಿಸಿಕೊಳ್ಳಬಹುದು. ನೀವು ನಿಮ್ಮ ಆಯ್ಕೆಯ ಭಾಷೆಯಲ್ಲಿ ಜ್ಯೋತಿಷಿಗಳ ಜೊತೆ ಚಾಟ್ ಕೂಡ ಮಾಡಬಹುದು.
ಇನ್ನು ತಡ ಮಾಡಬೇಡಿ, ಈಗಲೇ ಗಣೇಶ ಗಿಫ್ಟ್ ಬಾಕ್ಸ್ ಬುಕ್ ಮಾಡಿ, ಹಬ್ಬವನ್ನು ಸಂಭ್ರಮದಿಂದಾಚರಿಸಿ. ಗಣೇಶ ಪೂಜಾ ಬಾಕ್ಸ್ www.pujanpujari.com ನಲ್ಲಿ 599 ರೂ.ಗೆ ಲಭ್ಯ.