Saturday, 14th December 2024

ಬಾಟಾ ಶೂ ಕಂಪನಿಯ ಸಿಇಒ ಆಗಿ ಸಂದೀಪ್ ಕಠಾರಿಯಾ

ನವದೆಹಲಿ: ಪಾದರಕ್ಷೆಗಳ ಉತ್ಪಾದಕ ಬಾಟಾ ಶೂ ಸಂಸ್ಥೆ ಸಂದೀಪ್ ಕಠಾರಿಯಾ ಅವರನ್ನು ತನ್ನ ಜಾಗತಿಕ ಸಂಸ್ಥೆಯ ಸಿಇಒ ಆಗಿ ಆಯ್ಕೆ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಬಾಟಾ ಸಂಸ್ಥೆಯ ಸಿಇಒ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಂದೀಪ್ ಕಠಾರಿಯಾ ಪಾತ್ರರಾಗಿ ದ್ದಾರೆ. ಸುಮಾರು ಐದು ವರ್ಷಗಳ ಕಾಲ ಸಿಇಒ ಆಗಿದ್ದ ಅಲೆಕ್ಸಿಸ್ ನಾಸಾರ್ಡ್‌ ಸ್ಥಾನಕ್ಕೆ ಸಂದೀಪ್ ತಕ್ಷಣವೇ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡಿದ್ದಾರೆ.

ಸಂದೀಪ್ ಅವರು ಜಾಗತಿಕ ಉದ್ಯಮ ಸಂಸ್ಥೆಗಳಾದ ಯೂನಿ ಲಿವರ್, ಯಮ್ ಬ್ರಾಂಡ್ಸ್, ವೊಡಾಫೋನ್ ನಲ್ಲಿ 24 ವರ್ಷಗಳ ಅನುಭವ ಹೊಂದಿದ್ದರು. ಸಿಇಒ ಆಗಿ ಆಯ್ಕೆಯಾಗಿರುವ ಸಂದೀಪ್ ಕಠಾರಿಯಾ ತನ್ನ ಮುಂದಿನ ಪಯಣದ ಕುರಿತು ಸಾಕಷ್ಟು ಉತ್ಸುಕರಾಗಿದ್ದು, 125 ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯ ಮತ್ತಷ್ಟು ಏಳಿಗೆಗೆ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.