ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಂಡೋಲಿ ಗ್ರಾಮದಲ್ಲಿರುವ ಮೈದಾನದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಶನಿವಾರ ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶದ ಹಿಂದಿನ ಕಾರಣವನ್ನ ಇನ್ನೂ ಸ್ಪಷ್ಟಪಡಿಸಲಾಗಿಲ್ಲ.
ತಾಂತ್ರಿಕ ವೈಫಲ್ಯದಿಂದಾಗಿ ಇದು ಸಂಭವಿಸಿದೆ ಎಂದು ವರದಿಯಾಗಿದೆ.
ಬೆಳಿಗ್ಗೆ 11:30ರ ಸುಮಾರಿಗೆಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಹೊಲದಲ್ಲಿ ಇಳಿದು ಹತ್ತಿರದ ಗ್ರಾಮಸ್ಥರ ಗಮನ ಸೆಳೆಯಿತು.