Friday, 13th December 2024

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವತ್ ಬಂಧನ

ಮುಂಬೈ: ಮುಂಬೈನ ಚಾವಾಲ್ ಅಭಿವೃದ್ಧಿ ಯೋಜನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ರಾಜ್ಯ ಸಭೆ ಸದಸ್ಯ ಸಂಜಯ್ ರಾವತ್ ಅವರನ್ನು ಭಾನುವಾರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ.

ಹಲವು ದಾಖಲೆ ಸೇರಿ 11.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ .

ನಿವಾಸದಲ್ಲಿ 9 ತಾಸು ಶೋಧ ನಂತರ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‍ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ ರಾವತ್ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ಬಳಿಕ ತನಿಖೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಹಾಜರುಪಡಿಸ ಲಾಗುವುದು, ಅಲ್ಲಿ ಜಾರಿ ನಿರ್ದೇಶನಾಲಯವು ಅವರ ಕಸ್ಟಡಿಗೆ ಕೋರಲಿದೆ ಎಂದು ತಿಳಿಸಿದ್ದಾರೆ. ಕಳೆದ ಏಪ್ರಿಲ್‍ನಲ್ಲಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರಿಗೆ ಸೇರಿದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

ಮುಂಬೈನ ಉಪನಗರ ದಾದನರ್‍ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗನ ಕಿಹಿಮ್ ಬೀಚ್‍ನಲ್ಲಿರುವ ಎಂಟು ಪ್ಲಾಟ್‍ಗಳು ವರ್ಷಾ ರಾವುತ್ ಮತ್ತು ಸಂಜಯ್ ರಾವತ್ ಅವರ ಆಪ್ತ ಸಹಚರ ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದಾರೆ ಎಂದು ಇಡಿ ತಿಳಿಸಿದೆ.