Tuesday, 12th November 2024

Sanjay Dutt : 65ನೇ ವರ್ಷಕ್ಕೆ ಸಪ್ತಪದಿ ತುಳಿದ ನಟ ಸಂಜಯ್ ದತ್‌!

Sanjay Dutt

ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ. ಅವರು ಮದುವೆಯ ಶಾಸ್ತ್ರದ ಪ್ರಾರ್ಥನೆಯಲ್ಲಿ ಭಾಗವಹಿಸುವಂತ ಹೊಸ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ. ನಟ ತನ್ನ ಪತ್ನಿ ಮಾನ್ಯತಾ ದತ್ ಅವರೊಂದಿಗೆ ಅಗ್ನಿಕುಂಡದ ಸುತ್ತ ಸುತ್ತುವ ವಿಡಿಯೊ ಅದಾಗಿದೆ. ಅಂದ ಹಾಗೆ ಈ ಜೋಡಿ ಮದುವೆಯಾಗಿ 16 ವರ್ಷಗಳಾಗಿವೆ. ಇದೀಗ ಮತ್ತೆ ಮದುವೆಯ ಶಾಸ್ತ್ರಗಳಲ್ಲಿ ಪಾಲ್ಗೊಂಡಿರುವುದು ಅಚ್ಚರಿ ಮೂಡಿಸಿದೆ.

ವೀಡಿಯೊದಲ್ಲಿ, ಸಂಜಯ್ ಕಿತ್ತಳೆ ಬಣ್ಣದ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಮಾನ್ಯತಾ ಕ್ರೀಮ್ ಬಣ್ಣದ ಬಟ್ಟೆ ಧರಿಸಿರುವುದು ಕಂಡುಬಂದಿದೆ. ಬಾಲಿವುಡ್ ಬಬಲ್ ಪ್ರಕಾರ, ಸಂಜಯ್ ಮತ್ತು ಮಾನ್ಯತಾ ಗೃಹಪ್ರವೇಶ ಪೂಜೆಯ ಸಮಯದಲ್ಲಿ ‘ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ. ದಂಪತಿ ಇತ್ತೀಚೆಗೆ ತಮ್ಮ ಮನೆಯನ್ನು ನವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪೂಜೆ ಆಯೋಜಿಸಿದ್ದರು.

ಮಾನ್ಯತಾ ಅವರು ಸಂಜಯ್ ಗೆ ಮೂರನೇ ಪತ್ನಿ. ಅವರು 2008ರಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ ಗೋವಾದಲ್ಲಿ ವಿವಾಹವಾಗಿದ್ದರು. ಅದಕ್ಕೂ ಮೊದಲು ಸಂಜಯ್ ರಿಯಾ ಪಿಳ್ಳೈ ಅವರನ್ನು ವಿವಾಹವಾಗಿದ್ದರು. ಅವಳು ಏರ್ ಹೋಸ್ಟೆಸ್ ಮತ್ತು ರೂಪದರ್ಶಿಯಾಗಿದ್ದಳು. ಮೊದಲಿಗೆ ರಿಚಾ ಶರ್ಮಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ತ್ರಿಶಾಲಾ ದತ್ ಎಂಬ ಮಗಳು ಇದ್ದಳು. ರಿಚಾ 1996 ರಲ್ಲಿ ಮೆದುಳಿನ ಗೆಡ್ಡೆಯಿಂದ ನಿಧನ ಹೊಂದಿದ್ದಾರೆ. ತ್ರಿಶಲಾ ಮಾನ್ಯತಾ ಜತೆ ಕಾಣಿಸಿಕೊಳ್ಳುತ್ತಿರುತ್ತಾರೆ.

ತ್ರಿಶಾಲಾ ಅವರಲ್ಲದೆ, ಸಂಜಯ್ ಗೆ ಮಾನ್ಯತಾ ಮೂಲಕ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ. ನನ್ನ ಮೂವರು ಮಕ್ಕಳು ಅವರು ಮಾಡುವ ಯಾವುದೇ ಕೆಲಸದ ಬಗ್ಗೆ ಸಂತೋಷ ಬಯಸುತ್ತೇನೆ. ನಾನು ಇಂದಿಗೂ ನಟಿಸುತ್ತಿದ್ದೇನೆ ಏಕೆಂದರೆ ನಾನು ಮಾಡುವ ಕೆಲಸವನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ ಎಂದು ಸಂಜಯ್ ಹೇಳಿದ್ದಾರೆ.

ಇದನ್ನೂ ಓದಿ: Bigg Boss Telugu 8: ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡಿಗರದ್ದೇ ಹವಾ

ತ್ರಿಶಾಲಾ ಮನೋವೈದ್ಯರಾಗಿದ್ದಾರೆ ಮತ್ತು ಮಾನಸಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಶಹ್ರಾನ್ ಫುಟ್ಬಾಲ್ ಆಟಗಾರ. ಇಕ್ರಾ ಚಿತ್ರ ಕಲಾವಿದೆ. ಅವಳ ವಯಸ್ಸಿನ ಯಾರಾದರೂ ಇಷ್ಟು ಸುಂದರವಾಗಿ ಚಿತ್ರಿಸಬಲ್ಲರು ಎಂದು ನಂಬುವುದು ಕಷ್ಟಎಂದು ಮಾನ್ಯತಾ ಹೇಳಿದ್ದರು.

ಸಂಜಯ್ ದತ್‌, ಪ್ರಭಾಸ್ ಅವರೊಂದಿಗೆ ರಾಜಾ ಸಾಬ್ ಮತ್ತು ಕೆಡಿ – ದಿ ಡೆವಿಲ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.