Thursday, 3rd October 2024

ಸಂಸದ ಸಂಜಯ್ ರಾವತ್ ಇಡಿ ಕಸ್ಟಡಿ ಅವಧಿ ವಿಸ್ತರಣೆ

ನವದೆಹಲಿ: ಪತ್ರಾ ಚಾಲ್ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವ್ರ ಇಡಿ ಕಸ್ಟಡಿ ಅವಧಿ ಯನ್ನ ಆ.8 ರವರೆಗೆ ವಿಸ್ತರಿಸಲಾಗಿದೆ.

ರಾವತ್‌ರನ್ನ ನ್ಯಾಯಾಲಯವು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ಒಪ್ಪಿಸಿದೆ.

ಗುರುವಾರ ಸಂಜಯ್ ರಾವತ್ ಕಸ್ಟಡಿ ಅವಧಿ ಮುಗಿದಿದ್ದು, ಅವರನ್ನ ಇಡಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ಈ ಮೂಲಕ ಕೋರ್ಟ್‌ ಐದು ದಿನಗಳ ಕಾಲ ಇಡಿಯ ಕಸ್ಟಡಿಗೆ ಕಳುಹಿಸಲು ನಿರ್ಧರಿಸಿದೆ.

ಒಂದು ದಿನದ ವಿಚಾರಣೆಯ ನಂತರ ಜುಲೈ 31ರ ರಾತ್ರಿ ಇಡಿ ರಾವತ್ ಬಂಧಿಸಿತ್ತು.