Saturday, 5th October 2024

ದೆಹಲಿ ಹೈಕೋರ್ಟ್’ನ ನ್ಯಾಯಾಧೀಶರನ್ನಾಗಿ ಮೊದಲ ಸಲಿಂಗಕಾಮಿ ನೇಮಕ

ನವದೆಹಲಿ: ದೇಶವು ಅಂತಿಮವಾಗಿ ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷತೆ ವಹಿಸುವ ನ್ಯಾಯಾಧೀಶರನ್ನಾಗಿ ಸಲಿಂಗಕಾಮಿಯೊಬ್ಬರು ನೇಮಕವಾಗಿದ್ದಾರೆ. ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಈ ಮೂಲಕ ಭಾರತದ ಮೊದಲ ಸಲಿಂಗಕಾಮಿ ನ್ಯಾಯಾಧೀಶರಾಗಲಿದ್ದಾರೆ. ನ.11 ರಂದು ಕೊಲಿಜಿಯಂ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ಉನ್ನತ ನ್ಯಾಯಾಲಯ ಹೇಳಿಕೆ ತಿಳಿಸಿದೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ‘ದೇಶದ ಉಚ್ಚ ನ್ಯಾಯಾಲಯದ ಮೊದಲ ಸಲಿಂಗಕಾಮಿ ನ್ಯಾಯಾಧೀಶರಾಗಲು ಸಜ್ಜಾಗಿರುವ ಸೌರಭ್ ಕೃಪಾಲ್ ಅವರಿಗೆ ಅಭಿನಂದನೆಗಳು’ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.