Sunday, 3rd November 2024

2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಬಂಜರು ಭೂಮಿಗೆ ಕಾಯಕಲ್ಪ: ನರೇಂದ್ರ ಮೋದಿ

ನವದೆಹಲಿ : ನಮ್ಮ ಸೌರಶಕ್ತಿ ಸಾಮರ್ಥ್ಯ ಸುಮಾರು 18 ಪಟ್ಟು ಹೆಚ್ಚಾಗಿದೆ. ಇದು ಪರಿಸರವನ್ನು ರಕ್ಷಿಸುವ ನಮ್ಮ ಬದ್ಧತೆಯ ಫಲಿತಾಂಶ ವಾಗಿದೆ. ಪರಿಸರ ದಿನದ ದಿನದಂದು ಭಾರತ ಮತ್ತೊಂದು ಸಾಧನೆ ಮಾಡಿದೆ. ಇಂದು ಭಾರತವು ಪೆಟ್ರೋಲ್‌ನಲ್ಲಿ 10% ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಜ್ಞಾನ ಭವನದಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ ‘ಮಣ್ಣು ಉಳಿಸಿ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ,ನಮ್ಮ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 40% ರಷ್ಟು ಪಳೆಯುಳಿಕೆ-ಇಂಧನ ಆಧಾರಿತವಲ್ಲದ ಮೂಲ ಗಳಿಂದ ಪಡೆಯುವ ಗುರಿಯನ್ನು ನಾವು ಹೊಂದಿದ್ದೇವೆ. ಅವಧಿಗಿಂತ 9 ವರ್ಷ ಮುಂಚಿತವಾಗಿಯೇ ಭಾರತ ಈ ಗುರಿಯನ್ನು ಸಾಧಿಸಿದೆ. ಭಾರತವು 2030 ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಬಂಜರು ಭೂಮಿಯನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದರು.

ಪರಿಸರವನ್ನು ರಕ್ಷಿಸಲು, ಇಂದು ಭಾರತವು ನಿರಂತರವಾಗಿ ಹೊಸ ಆವಿಷ್ಕಾರಗಳು ಮತ್ತು ಪರ ಪರಿಸರ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದೆ ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಗಂಗಾನದಿಯ ದಡದಲ್ಲಿರುವ ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಿ, ನೈಸರ್ಗಿಕ ಕೃಷಿಯ ಬೃಹತ್ ಕಾರಿಡಾರ್ ಮಾಡುವುದಾಗಿ ನಿರ್ಧರಿಸಿ ದ್ದೇವೆ. ಇದರಿಂದ ನಮ್ಮ ಹೊಗಳು ರಾಸಾಯನಿಕ ಮುಕ್ತವಾಗುವುದಲ್ಲದೆ, ನಮಾಮಿ ಗಂಗೆ ಅಭಿಯಾನಕ್ಕೆ ಹೊಸ ಶಕ್ತಿ ಬರಲಿದೆ ಎಂದರು.

ಇದು ಭಾರತದ ಅರಣ್ಯ ಪ್ರದೇಶವನ್ನು 7,400 ಚದರ ಕಿ.ಮೀ.ಗಿಂತ ಹೆಚ್ಚು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ಭಾರತವು 20,000 ಚದರ ಕಿಲೋ ಮೀಟರ್‌ಗಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಹೆಚ್ಚಿಸಿದೆ.

‘ ಮಳೆ ಹಿಡಿಯಿರಿ’ ಎಂಬ ಅಭಿಯಾನದ ಮೂಲಕ ದೇಶದ ಜನತೆಗೆ ಜಲಸಂರಕ್ಷಣೆಯ ಸಂಪರ್ಕ ಕಲ್ಪಿಸುತ್ತಿದ್ದೇವೆ. ಈ ವರ್ಷದ ಮಾರ್ಚ್‌ನಲ್ಲಿಯೇ ದೇಶದ 13 ದೊಡ್ಡ ನದಿ ಗಳನ್ನು ಸಂರಕ್ಷಿಸುವ ಅಭಿಯಾನವೂ ಆರಂಭವಾಗಿದೆ. ಇದರಲ್ಲಿ ನೀರಿನ ಮಾಲಿನ್ಯ ವನ್ನು ಕಡಿಮೆ ಮಾಡುವುದರೊಂದಿಗೆ ನದಿಗಳ ದಡದಲ್ಲಿ ಕಾಡುಗಳನ್ನು ನೆಡುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದರು.

ಸದ್ಗುರು ಜಗ್ಗಿ ವಾಸುದೇವ್ ಅವರು ಮಣ್ಣು ಉಳಿಸಿ ಅಭಿಯಾನವನ್ನು ಮಾರ್ಚ್‌ನಲ್ಲಿ ಪ್ರಾರಂಭಿಸಿದ್ದರು, ಅವರು 27 ದೇಶಗಳ ಮೂಲಕ ಹಾದುಹೋಗಿ 100 ದಿನಗಳ ಮೋಟಾರ್‌ಸೈಕಲ್ ಪ್ರಯಾಣ ಪ್ರಾರಂಭಿಸಿದ್ದರು, ಜೂನ್ 5 ವಿಶ್ವ ಪರಿಸರ ದಿನಾಚರಣೆ ಪ್ರಯಾಣದ 75 ನೇ ದಿನವಾಗಿದೆ.