Friday, 29th March 2024

ಶೀತ ಅಲೆ: ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಪಾಟ್ನಾ: ಪಾಟ್ನಾದಲ್ಲಿ ಶೀತ ಅಲೆಗಳು ಬೀಸುತ್ತಿರುವ ಪರಿಣಾಮ ಒಂದರಿ೦ದ 8ನೇ ತರಗತಿವರೆಗೂ ಶಾಲೆಗಳಿಗೆ ಜ. 31 ರವರೆಗೆ ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಶೀತಗಾಳಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 8 ನೇ ತರಗತಿವರೆಗೂ ಶಾಲೆಗಳಿಗೆ ರಜೆ ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಉತ್ತರ ರಾಜಸ್ಥಾನ, ಹಿಮಾ ಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಶೀತ ಅಲೆಗಳ ಪರಿಸ್ಥಿತಿಗಳು ಹೆಚ್ಚಾಗಿವೆ ಎಂದು ಐಎಂಡಿ ಹೇಳಿದೆ.

ಉತ್ತರಾಖಂಡ್ ನ ಹರಿದ್ವಾರದಲ್ಲಿಯೂ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಪಂಜಾಬ್ ನ ಅಮೃತಸರದಲ್ಲಿ ಮಂಜು ಮತ್ತು ಶೀತ ತರಂಗ ಪರಿಸ್ಥಿತಿಗಳು 6.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

error: Content is protected !!