Sunday, 13th October 2024

ಎಸ್‌ಸಿ-ಎಸ್‌ಟಿ ಮೀಸಲಾತಿ: ಶೇ.4 ರಿಂದ ಶೇಕಡಾ ಹತ್ತಕ್ಕೆ ಏರಿಕೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.4 ರಿಂದ ಶೇಕಡಾ ಹತ್ತಕ್ಕೆ ಹೆಚ್ಚಿಸಲಾಗಿದೆ ಎಂದು ಘೋಷಿಸಿದ್ದಾರೆ.

ಹೈದರಾಬಾದ್‌ನ ಎನ್‌ಟಿಆರ್‌ ಕ್ರೀಡಾಂಗಣದಲ್ಲಿ ‘ಬುಡಕಟ್ಟು ಆತ್ಮೀಯ ಸಮ್ಮೇಳನ’ ದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಭಾಷಣ ಮಾಡಿದ ಸಂದರ್ಭ ಈ ಘೋಷಣೆ ಮಾಡಿದ್ದಾರೆ ಎಂದು ಮೂಲಗಳ ವರದಿ ತಿಳಿಸಿದೆ.

ಆದಿವಾಸಿಗಳಿಗಾಗಿ ಹೈದರಾಬಾದ್ ನಗರದ ಹೃದಯಭಾಗದಲ್ಲಿರುವ ಬಂಜಾರಾ ಹಿಲ್ಸ್‌ನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕುಮ್ರಂ ಭೀಮ್ ಆದಿವಾಸಿ ಮತ್ತು ಸೇವಾಲಾಲ್ ಬಂಜಾರ ಭವನಗಳನ್ನು ಪ್ರಾರಂಭಿಸಿದ್ದೇವೆ. ಎಲ್ಲಾ ಬುಡಕಟ್ಟು ಮತ್ತು ಆದಿವಾಸಿ ಬುಡಕಟ್ಟುಗಳಿಗೆ ಅಭಿನಂದನೆಗಳು.” ಎಂದು ಸಿಎಂ ಹೇಳಿದ್ದಾರೆ

“ಎಸ್‌ಟಿಗಳಿಗೆ ಮೀಸಲಾತಿಯನ್ನು ಶೇಕಡಾ 10 ಕ್ಕೆ ಹೆಚ್ಚಿಸಲು, ತೆಲಂಗಾಣ ವಿಧಾನಸಭೆ ಯಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.

ನಮ್ಮ ಬುಡಕಟ್ಟು ಮಸೂದೆಯನ್ನು ಅಂಗೀಕರಿಸಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿ. ರಾಷ್ಟ್ರಪತಿಯೂ ಆದಿವಾಸಿ ಹಿನ್ನೆಲೆ ಯವರೇ ಆಗಿದ್ದಾರೆ, ಆದ್ದರಿಂದ ಅವರು ಈ ಮಸೂದೆಯನ್ನು ನಿಲ್ಲಿಸುವುದಿಲ್ಲ”. ಎಂದು ಕೆಸಿಆರ್ ಹೇಳಿದ್ದಾರೆ.