Saturday, 12th October 2024

ರಾಜ್ ಕುಂದ್ರಾ ಕಂಪನಿಗೆ 3 ಲಕ್ಷ ರೂ. ದಂಡ ವಿಧಿಸಿದ ಸೆಬಿ

ಮುಂಬೈ :‌ ಸೆಬಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ʼಗೆ ಅದರ ಇನ್ ಸೈಡರ್ ಟ್ರೇಡಿಂಗ್ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ 3 ಲಕ್ಷ ರೂ. ದಂಡ ವಿಧಿಸಿದೆ.

ಸೆಬಿ ನಿಬಂಧನೆಗಳು, 2015 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ವಿಯಾನ್ ಇಂಡಸ್ಟ್ರೀಸ್ ಮತ್ತು ಅದರ ಪ್ರವರ್ತಕರಾದ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರಿಗೆ 3 ಲಕ್ಷ ರೂ.ಗಳ ದಂಡ ವಿಧಿಸಿದೆ.

2013-2015ರ ಅವಧಿಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ʼನಲ್ಲಿ ಪಟ್ಟಿ ಮಾಡಲಾದ ಕಂಪನಿಯ ವಹಿವಾಟುಗಳ ತನಿಖೆಯ ಆಧಾರದ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ.

ವಿಲ್ ನಾಲ್ಕು ಜನರಿಗೆ 5,00,000 ಈಕ್ವಿಟಿ ಷೇರುಗಳನ್ನ ಆದ್ಯತೆಯ ಹಂಚಿಕೆ ಮಾಡಿತು ಮತ್ತು ಸದರಿ ಆದ್ಯತೆ ಯ ಹಂಚಿಕೆಯಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರಿಗೆ ತಲಾ 1,28,800 ಷೇರುಗಳನ್ನು ಹಂಚಿಕೆ ಮಾಡಲಾಯಿತು.

ಈ ನಿಟ್ಟಿನಲ್ಲಿ, ಆದ್ಯತೆಯ ಹಂಚಿಕೆಯ ಮೂಲಕ ಷೇರುಗಳ ಹಂಚಿಕೆಗೆ ಅನುಸಾರ ವಾಗಿ, ಇಬ್ಬರೂ ಪಿಐಟಿ ನಿಬಂಧನೆಗಳ ನಿಯಂತ್ರಣ 7(2) (ಎ) ನಿಬಂಧನೆಗಳ ವಿಷಯದಲ್ಲಿ ಕಂಪನಿಗೆ ಅಗತ್ಯ ಬಹಿರಂಗಪಡಿಸಬೇಕಾಗಿತ್ತು.