Saturday, 14th December 2024

ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊಗೆ 2ನೇ ಬಾರಿ ಕೋವಿಡ್‌-19 ದೃಢ

ಕೋಲ್ಕತ್ತಾ: ಕೇಂದ್ರ ಸಚಿವ ಮತ್ತು ಕೋಲ್ಕತ್ತಾದ ಟಾಲಿಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊ ಅವರಿಗೆ 2ನೇ ಬಾರಿ ಕೋವಿಡ್‌-19 ದೃಢಪಟ್ಟಿದೆ.

ಈ ಕುರಿತು ಬಾಬುಲ್‌ ಸುಪ್ರಿಯೋ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ನನಗೆ ಹಾಗೂ ನನ್ನ ಪತ್ನಿಗೆ ಕರೋನಾ ಸೋಂಕು ದೃಢಪಟ್ಟಿದೆ. ನನಗೆ ಎರಡನೇ ಬಾರಿ ಕೋವಿಡ್‌ ದೃಢಪಟ್ಟಿದೆ. ಆಸನ್‌ಸೋಲ್‌ನಲ್ಲಿ ಮತದಾನ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರವಾಗಿದೆ. 26ರಂದು ಮತದಾನದ ದಿನ ನಾನು ಅಲ್ಲಿರಬೇಕಿತ್ತು. ಎಂದು ಹೇಳಿದ್ದಾರೆ.