Saturday, 14th December 2024

ಕಂದಕಕ್ಕೆ ಉರುಳಿದ ಬಸ್: ನಾಲ್ವರ ಸಾವು, 45 ಮಂದಿಗೆ ಗಾಯ

ಸೇಲಂ: ತಮಿಳುನಾಡಿನ ಸೇಲಂನಲ್ಲಿ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರ್ಕಾಡ್‌ನಿಂದ ಸೇಲಂಗೆ ತೆರಳುತ್ತಿದ್ದ ಖಾಸಗಿ ಬಸ್‌ ನಿಯಂತ್ರಣ ತಪ್ಪಿ ಗುಡ್ಡದ ಕೆಳಗೆ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ.

13 ನೇ ಹೇರ್‌ಪಿನ್ ಬೆಂಡ್ ಬಳಿ ಚಾಲಕನು ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ಬೆಟ್ಟದ ಇಳಿಜಾರಿನಲ್ಲಿ ತುಂಬಾ ಕಾಳಜಿಯಿಂದ ಚಲಿಸಬೇಕಾಗುತ್ತದೆ.

ಅಪಘಾತದ ಸ್ಥಳಕ್ಕೆ ಸ್ಥಳೀಯರೊಂದಿಗೆ ರಕ್ಷಣಾ ತಂಡಗಳು ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಕನಿಷ್ಠ ನಾಲ್ವರು ಗಾಯಗೊಂಡು ಸಾವನ್ನಪ್ಪಿದ್ದಾರೆ. ಸೇಲಂ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಬಿಲನ್ ಮತ್ತು ಸೇಲಂ ಶಾಸಕ ಆರ್ ರಾಜೇಂದ್ರನ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಸ್ಥಳದಲ್ಲಿ ಉಪಸ್ಥಿತರಿದ್ದರು.