ವಡೋದರಾ: ವಡೋದರಾದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಇದು ಭಾರತದ ಪ್ರಥಮ ಸ್ವಯಂ ವಿವಾಹ ಪ್ರಕರಣ ವಾಗಿದೆ.
ಬಿಜೆಪಿ ನಾಯಕಿಯೊಬ್ಬರು ಆಕೆಯ ಮದುವೆ ವಿರೋಧಿಸಿದ ನಂತರ ಮತ್ತು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿಸು ವುದಿಲ್ಲ ಎಂದು ಹೇಳಿದ ಕಾರಣದಿಂದ ಅನಗತ್ಯ ವಿವಾದ ತಪ್ಪಿಸಲು ಕ್ಷಮಾ ಬಿಂದು ನಿಗದಿತ ದಿನಾಂಕ ಕ್ಕಿಂತ ಕೆಲವು ದಿನಗಳ ಮುಂಚಿತವಾಗಿ ವಿವಾಹವಾದರು. ಈ ಮೊದಲು ಜೂನ್ 11ರಂದು ಮದುವೆಯಾಗಲು ನಿಶ್ಚಯಿಸಿದ್ದರು.
ವಿವಾಹದ ನಂತರ ವೀಡಿಯೊದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞ ರಾಗಿರುತ್ತೇನೆ ಎಂದು ಹೇಳಿದರು.
ಕ್ಷಮಾ ಬಿಂದು ಅವರು ಸಂಪ್ರದಾಯಗಳನ್ನು ಪಾಲಿಸಿಯೇ ಸ್ವಯಂ ವಿವಾಹವಾದರು. ಹಳದಿ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮಗಳೂ ನಡೆದಿದ್ದವು. ವಿವಾಹದ ಬಳಿಕ ಹನಿಮೂನ್ ಗೆ ಎರಡು ವಾರಗಳ ಕಾಲ ಗೋವಾಗೆ ಹೋಗುವುದಾಗಿ ಕ್ಷಮಾ ಬಿಂದು ಹೇಳಿದ್ದರು.