Saturday, 23rd November 2024

ಸಂವೇದಿ ಸೂಚ್ಯಂಕ 123.53 ಅಂಕಗಳಷ್ಟು ಇಳಿಕೆ, ನಿಫ್ಟಿ ಕುಸಿತ

ಮುಂಬೈ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ 123.53 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯ ಗೊಳಿಸಿದೆ. ನಿಫ್ಟಿ 31.60ಅಂಕಗಳಷ್ಟು ಕುಸಿತ ಕಂಡಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 123.53 ಅಂಕಗಳಷ್ಟು ಇಳಿಕೆಯಾಗಿ, 52,852.27 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆ ಗೊಂಡಿದೆ. ನಿಫ್ಟಿ ಕೂಡ 31.60 ಅಂಕಗಳಷ್ಟು ಇಳಿಕೆಯಾಗಿದ್ದು, 15,824.45ರ ಗಡಿಗೆ ಕುಸಿದಿದೆ.

ಸೆನ್ಸೆಕ್ಸ್ ಇಳಿಕೆಯಿಂದ ಪಿಎಸ್ ಯು ಬ್ಯಾಂಕ್ಸ್, ಆಟೋ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದೆ. ಎಸ್ ಬಿಐ, ಆರ್ ಐಎಲ್, ಮಹೀಂದ್ರ ಆಯಂಡ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿದೆ. ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 53,103.42ರ ಗಡಿ ತಲುಪಿತ್ತು. ಕೊನೆಗೆ 123 ಅಂಕ ಕುಸಿತವಾಗುವ ಮೂಲಕ 52,852.27 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.