Saturday, 23rd November 2024

ಸಂವೇದಿ ಸೂಚ್ಯಂಕ: 221.49 ಅಂಕ ಏರಿಕೆ

ಮುಂಬೈ: ಅಮೆರಿಕ ಆರ್ಥಿಕ ಸ್ಥಿತಿ ಮತ್ತು ಸಾಲ ಮಿತಿಯ ಬಿಕ್ಕಟ್ಟಿನ ನಡುವೆಯೂ ವಿಶ್ವಾದ್ಯಂತ ಶುಕ್ರವಾರ ಷೇರುಪೇಟೆಯ ಆರಂಬಿಕ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ.

ಬಾಂಬೆ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ (BSE) ಆರಂಭಿಕ ವಹಿವಾಟಿನಲ್ಲಿ 221.49 ಅಂಕ ಏರಿಕೆಯೊಂದಿಗೆ 63,139.12 ಅಂಕಗಳ ಮಟ್ಟ ತಲುಪಿದೆ.

ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ ಕೂಡ 68.60 ಅಂಕ ಜಿಗಿತದೊಂದಿಗೆ 18,756.70 ಅಂಕಗಳ ಮಟ್ಟಕ್ಕೆ ಏರಿಕೆಯಾಗಿದೆ. ಷೇರುಪೇಟೆಯ ಬಿಎಸ್‌ ಇ ಮತ್ತು ಎನ್‌ ಎಸ್‌ ಇ ಅಂಕ ದಾಖಲೆ ಮಟ್ಟಕ್ಕೆ ತಲುಪಿದೆ.

ಷೇರುಪೇಟೆ ವಹಿವಾಟಿನಲ್ಲಿ ಮೆಟಲ್‌, ಫಾರ್ಮಾ, ಮೀಡಿಯಾ ಷೇರುಗಳು ಲಾಭ ಗಳಿಸಿದೆ. ಇನ್ನುಳಿದಂತೆ ಡಾ.ರೆಡ್ಡೀಸ್‌, ಡೀವಿಸ್‌ ಲ್ಯಾಬ್‌, ಹಿಂಡಲ್ಕೋ, ಅದಾನಿ ಎಂಟರ್‌ ಪ್ರೈಸಸ್‌ ಮತ್ತು ಆಲ್ಟ್ರಾಟೆಕ್‌ ಸಿಮೆಂಟ್‌ ಷೇರುಗಳು ಲಾಭ ಗಳಿಸಿದೆ.