ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರಿಕೆ ಮುಂದುವರಿಸಿದೆ. ದಿನದ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 235 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 73.90 ಪಾಯಿಂಟ್ಸ್ ಏರಿಕೆಯಾಗಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 235.39 ಪಾಯಿಂಟ್ಸ್ ಏರಿಕೆಗೊಂಡು 52608.08 ಮುಟ್ಟಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 73.90 ಪಾಯಿಂಟ್ಸ್ ಹೆಚ್ಚಾಗಿ 15766.50 ತಲುಪಿದೆ. ದಿನದ ವಹಿವಾಟು ಆರಂಭಗೊಂಡಾಗ 1,507 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು. ಸುಮಾರು 1,205 ಷೇರುಗಳು ಏರಿಕೆ ಗೊಂಡರೆ, 234 ಕುಸಿದವು.
ಶ್ರೀ ಸಿಮೆಂಟ್ನ ಷೇರು 269 ರೂ.ಗಳ ಏರಿಕೆ ಕಂಡು 28,303.45 ರೂ. ಹಿಂಡಾಲ್ಕೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 392.50 ರೂ., ಬಜಾಜ್ ಫೈನಾನ್ಸ್ ಷೇರುಗಳು 49 ರೂ.ಗಳ ಏರಿಕೆ ಕಂಡು 6,198.50 ರೂ., ಟಾಟಾ ಸ್ಟೀಲ್ ಷೇರುಗಳು 9 ರೂ.ಗಳ ಏರಿಕೆ ಕಂಡು 1,236.35 ರೂ. ತಲುಪಿದೆ.
ಬಜಾಜ್ ಫಿನ್ಸರ್ವ್ನ ಷೇರುಗಳು 29 ರೂ. ಹೆಚ್ಚಾಗಿ 12,880.00 ಕ್ಕೆ ಪ್ರಾರಂಭವಾಗಿದ್ದು, ಇನ್ಫೋಸಿಸ್ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 1,543.15 ರೂ. ತಲುಪಿದೆ.