Saturday, 14th December 2024

ಜಾಗತಿಕ ಸಕಾರಾತ್ಮಕ ಸೂಚನೆ: ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆ

share Market

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಜಾಗತಿಕ ಸಕಾರಾತ್ಮಕ ಸೂಚನೆಗಳ ಬೆನ್ನಲ್ಲೇ ಜಿಗಿತ ಕಂಡಿದೆ. ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 64 ಪಾಯಿಂಟ್ಸ್ ಹೆಚ್ಚಳವಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 57 ಪಾಯಿಂಟ್ಸ್ ಏರಿಕೆಗೊಂಡಿದ್ದು 54660.40 ಪಾಯಿಂಟ್ಸ್‌, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 64.55 ಪಾಯಿಂಟ್ಸ್‌ ಹೆಚ್ಚಾಗಿ 16322.80 ಮುಟ್ಟಿದೆ.

ಬಿಎಸ್‌ಇಯಲ್ಲಿ ಒಟ್ಟು 1,417 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 829 ಷೇರುಗಳು ಏರಿಕೆಗೊಂಡರೆ, 487 ಷೇರುಗಳು ಕುಸಿತದೊಂದಿಗೆ ಪ್ರಾರಂಭವಾದವು.

ಎಚ್‌ಡಿಎಫ್‌ಸಿ ಷೇರುಗಳು 26 ರೂಪಾಯಿ ಏರಿಕೆಯಾಗಿ 2,649.90 ರೂ., ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು 670.70 ರೂ. ಆರಂಭವಾಗಿದ್ದು, ಟೈಟಾನ್ ಕಂಪನಿಯ ಷೇರು 14 ರೂಪಾಯಿ ಹೆಚ್ಚಾಗಿ 1,813.50 ರೂಪಾಯಿಗೆ ಪ್ರಾರಂಭವಾಯಿತು. ಬಜಾಜ್ ಫಿನ್‌ಸರ್ವ್‌ನ ಷೇರುಗಳು 74 ರೂಪಾಯಿ ಹೆಚ್ಚಾಗಿ 14,321.00 ಕ್ಕೆ ಪ್ರಾರಂಭ ವಾಯಿತು.

ಶ್ರೀ ಸಿಮೆಂಟ್ ನ ಷೇರುಗಳು 255 ರೂ. ಇಳಿಕೆಯಾಗಿ 27,508.30 ಕ್ಕೆ ಆರಂಭವಾಯಿತು. ಹೀರೋ ಮೋಟೋ ಕಾರ್ಪ್ ಷೇರುಗಳು 2,817.90 ಕ್ಕೆ ಪ್ರಾರಂಭವಾಯಿತು. ಅಲ್ಟ್ರಾಟೆಕ್ ಸಿಮೆಂಟಾ ಷೇರುಗಳು 15 ರೂಪಾಯಿ ಇಳಿಕೆಯಾಗಿ 7,480.20 ಕ್ಕೆ ಆರಂಭವಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 211.91 ಕೋಟಿ ಮೌಲ್ಯದ ನಿವ್ವಳ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ 716.15 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.