Saturday, 23rd November 2024

ಷೇರುಪೇಟೆ ಏರಿಳಿತ: ಸೆನ್ಸೆಕ್ಸ್ 55 ಪಾಯಿಂಟ್ಸ್ ಹೆಚ್ಚಳ, ಚಿನ್ನದ ದರ ಕುಸಿತ

share Market

ಮುಂಬೈ: ಭಾರತದ ಷೇರುಪೇಟೆ ಗುರುವಾರ ಸಾಕಷ್ಟು ಏರಿಳಿತಗಳ ನಡುವೆ ಸೆನ್ಸೆಕ್ಸ್ 55 ಪಾಯಿಂಟ್ಸ್ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 16 ಪಾಯಿಂಟ್ಸ್ ಏರಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 54.81 ಪಾಯಿಂಟ್ಸ್ ಹೆಚ್ಚಾಗಿ 58,305.07 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 15.75 ಪಾಯಿಂಟ್ಸ್ ಏರಿಕೆಗೊಂಡು 17369.25 ಮುಟ್ಟಿದೆ. ಬಿಎಸ್‌ಇನಲ್ಲಿ ಒಟ್ಟು 3,350 ಕಂಪನಿಗಳು ವಹಿವಾಟು ನಡೆಸುತ್ತಿದ್ದು, ಈ ಪೈಕಿ 1,844 ಷೇರುಗಳು ಏರಿಕೆಗೊಂಡರೆ , 1,346 ಷೇರುಗಳು ಇಳಿಕೆ ಗೊಂಡವು.

ನೆಸ್ಲೆ ಷೇರು 618 ರೂ. ಏರಿಕೆಯೊಂದಿಗೆ 20,457.20 ರೂಗಳಲ್ಲಿ ಕೊನೆಗೊಂಡಿತು. ಭಾರ್ತಿ ಏರ್‌ಟೆಲ್‌ನ ಷೇರುಗಳು 186 ರೂಪಾಯಿ ಏರಿಕೆಯೊಂದಿಗೆ ರೂ. 686.15 ಕ್ಕೆ ಕೊನೆಗೊಂಡಿತು. ಒಎನ್ ಜಿಸಿ ಷೇರುಗಳು ರೂ. 122.15 ಕೊನೆಗೊಂಡರೆ, ಗ್ರೇಸಿಯಂ ಷೇರು ರೂ. 21 ರಷ್ಟು ಏರಿಕೆಯಾಗಿ 1,597.90 ರೂ.ನಲ್ಲಿ ಕೊನೆಗೊಂಡಿತು.

ಟೈಟಾನ್ ಕಂಪನಿಯ ಷೇರು ರೂ. 2234 ರಷ್ಟು ಇಳಿಕೆಯಾಗಿ ರೂ. 2,034.30 ಕ್ಕೆ ಕೊನೆಗೊಂಡಿತು. ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ರೂ. 737.35 ಕ್ಕೆ ಕೊನೆಗೊಂಡಿದ್ದು, ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ರೂ. 53 ರಷ್ಟು ಇಳಿಕೆಯಾಗಿ ರೂ .7,939.65 ಕ್ಕೆ ಕೊನೆಗೊಂಡಿತು.

ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆ ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಸತತ ನಾಲ್ಕನೇ ದಿನ ಕುಸಿತಗೊಂಡಿದೆ.