ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಧನಾತ್ಮಕ ವಹಿವಾಟಿನ ಪರಿಣಾಮ ಮಂಗಳವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ 672.71 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 672.71 ಅಂಕಗಳಷ್ಟು ಏರಿಕೆಯೊಂದಿಗೆ 59,855.93 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 179.60 ಅಂಕಗಳಷ್ಟು ಏರಿಕೆಯಾ ಗಿದ್ದು, 17,805.30 ಅಂಕಗಳ ಗಡಿ ತಲುಪಿದೆ. ಎನ್ ಟಿಪಿಸಿ, ಒಎನ್ ಜಿಸಿ, ಎಸ್ ಬಿಐ, ಪವರ್ ಗ್ರಿಡ್ ಮತ್ತು ಟೈಟಾನ್ ಕಂಪನಿ ಷೇರುಗಳು ಲಾಭಗಳಿಸಿದೆ.
ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಸನ್ ಫಾರ್ಮಾ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ಶ್ರೀ ಸಿಮೆಂಟ್ಸ್ ಷೇರುಗಳು ನಷ್ಟ ಕಂಡಿದೆ.
ಜಾಗತಿಕ ಷೇರುಪೇಟೆಯ ಟ್ರೆಂಡಿಂಗ್ ಹಿನ್ನೆಲೆಯಲ್ಲಿ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 277.85 ಅಂಕ ಏರಿಕೆಯೊಂದಿಗೆ 59,461.07 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 80.40 ಅಂಕಗಳಷ್ಟು ಏರಿಕೆಯಾಗಿದ್ದು, 17,706.10 ಅಂಕಗಳ ಮಟ್ಟ ತಲುಪಿತ್ತು.