Friday, 13th December 2024

ಸೆನ್ಸೆಕ್ಸ್ 905.16 ಪಾಯಿಂಟ್‌ ಕುಸಿತ

ಮುಂಬೈ: ಮಂಗಳವಾರ ದಿನದ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಮತ್ತೆ ಕುಸಿತದ ಹಾದಿಯಲ್ಲಿಯೇ ಮುಂದು ವರಿದಿದೆ.

ಬೆಳಗ್ಗೆ ವಹಿವಾಟು ಆರಂಭ ಹಂತಕ್ಕೆ ಸೆನ್ಸೆಕ್ಸ್ 905.16 ಪಾಯಿಂಟ್‌ಗಳಿಂದ 56,586.35 ಕ್ಕೆ ಕುಸಿದು, ನಿಫ್ಟಿ 253.80 ಪಾಯಿಂಟ್‌ಗಳಿಂದ 16,895.30 ಕ್ಕೆ ಇಳಿದಿದೆ. ಬಿಎಸ್‌ಇ ಸೆನ್ಸೆಕ್ಸ್ 794.86 ಪಾಯಿಂಟ್ ಗೆ ಇಳಿದಿದೆ. ಎನ್‌ಎಸ್‌ಇ ನಿಫ್ಟಿ 16909.30ಕ್ಕೆ ವಹಿವಾಟು ನಡೆಸಿ 239.80 ಪಾಯಿಂಟ್‌ ರಷ್ಟು ಕುಸಿದಿದೆ.

ಇಂದಿನ ವಹಿವಾಟು ಆರಂಭಕ್ಕೆ ರಿಯಾಲಿಟಿ, ಮಾಹಿತಿ ತಂತ್ರಜ್ಞಾನ, ಬಂಡವಾಳ ಸರಕುಗಳು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಕುಸಿತ ಕಂಡುಬಂದಿದೆ. ಲೋಹದ ವಲಯಗಳ ಉದ್ಯಮಗಳಲ್ಲಿ ಸೆನ್ಸೆಕ್ಸ್ ಇಂದು ಸ್ವಲ್ಪ ಏರಿಕೆ ಕಂಡುಬಂದಿದೆ.

ಹಲವಾರು ಮಾರುಕಟ್ಟೆಗಳಲ್ಲಿ ದರ ಏರಿಕೆಯಿಂದ ಸೆನ್ಸೆಕ್ಸ್ ಬಹಳ ಪ್ರಪಾತಕ್ಕೆ ಇಳಿದು ಹೂಡಿಕೆದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಸೆನ್ಸೆಕ್ಸ್ 2 ಸಾವಿರಕ್ಕೂ ಅಧಿಕ ಪಾಯಿಂಟ್ ಕುಸಿತ ಕಂಡುಬಂದಿತ್ತು.

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್‌ನಲ್ಲಿ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ದರವನ್ನು ಹೆಚ್ಚಿಸುವ ವದಂತಿಯು ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.