Monday, 14th October 2024

ಭರ್ಜರಿ ವಹಿವಾಟು ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 958 ಅಂಕಗಳ ಜಿಗಿತ

share Market

ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ ಬಾಂಬೆ ಷೇರು ಮಾರುಕಟ್ಟೆ ಸೆನ್ಸೆಕ್ಸ್ 958 ಅಂಕಗಳ ಜಿಗಿತ ದೊಂದಿಗೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿ ದಿನಾಂತ್ಯದ ವಹಿವಾಟು ಕೊನೆ ಗೊಂಡಿತ್ತು.

ಎನ್ಎಸ್ಇ ನಿಫ್ಟಿ 276.30 ಅಂಕಗಳ ಏರಿಕೆಯೊಂದಿಗೆ, ದಾಖಲೆ ಮಟ್ಟದ 17,822.95 ಅಂಕ ಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಷೇರು ಪೇಟೆ ಮಧ್ಯಂತರ ವಹಿವಾಟಿನ ವೇಳೆ ನಿಫ್ಟಿ 17,843.90 ಅಂಕಗಳ ಮಟ್ಟ ತಲುಪಿತ್ತು.

ಷೇರುಪೇಟೆ ಸೆನ್ಸೆಕ್ಸ್ ಆರಂಭಿಕವಾಗಿ 59,957.25 ಅಂಕಗಳ ಸಾರ್ವಕಾಲಿಕ ಗರಿಷ್ಠ ದಾಖಲೆಯ ಮಟ್ಟ ತಲುಪಿತ್ತು. ಅಂತ್ಯದಲ್ಲಿ ಸಂವೇದಿ ಸೂಚ್ಯಂಕ 958.03 ಅಂಕಗಳ ಏರಿಕೆಯೊಂದಿಗೆ 59,885.36 ಅಂಕದೊಂದಿಗೆ ದಾಖಲೆಯ ಮಟ್ಟ ತಲುಪಿದೆ.

ಬಜಾಜ್ ಫಿನ್ ಸರ್ವ್, ಎಲ್ ಆಯಂಡ್ ಟಿ, ಎಚ್ ಡಿಎಫ್ ಸಿ, ಆಯಕ್ಸಿಸ್ ಬ್ಯಾಂಕ್, ಎಸ್ ಬಿಐ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ.